ಕವನ ವಾಚನವು ಮಕ್ಕಳಲ್ಲಿ ನಾಡು ನುಡಿ ಪ್ರೇಮವನ್ನು ಮೈಗೂಡಿಸುತ್ತದೆ: ಶಿಕ್ಷಕ ಸುಭಾಷ್

0
42

ಕವನ ವಾಚನವು ಒಡೆದ ಮನಸ್ಸುಗಳನ್ನು ಒಂದುಗೂಡಿಸುತ್ತದೆ. ಆತ್ಮವಿಶ್ವಾಸ ಮತ್ತು ಸಹಬಾಳ್ವೆಯ ಮೌಲ್ಯ ವೃದ್ಧಿಸುತ್ತದೆ. ಎಲ್ಲಕ್ಕೂ ಮೇಲಾಗಿ ಮಕ್ಕಳಲ್ಲಿ ಸೃಜನಶೀಲ ಗುಣವನ್ನು ಮೈಗೂಡಿಸುತ್ತದೆ. ನಾಡು ನುಡಿ ನೆಲ ಜಲ ಸಂಸ್ಕೃತಿ ಸಂಸ್ಕಾರವನ್ನು ಮೈಗೂಡಿಸುತ್ತದೆ ಎಂದು ಶಿಕ್ಷಕ ಕವಿ ಸುಭಾಷ್ ಚವ್ಹಾಣ ಹೇಳಿದರು. ಹುಬ್ಬಳ್ಳಿ ಶಹರದ ಘಂಟಿಕೇರಿಯಲ್ಲಿರುವ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ೨೪ ನವೆಂಬರ್ ೨೦೨೫ರಲ್ಲಿ ನಡೆದ ಹುಬ್ಬಳ್ಳಿ ಶಹರ ತಾಲ್ಲೂಕು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ೫ ರಿಂದ ೭ ನೇ ತರಗತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಪ್ರಸಿದ್ಧ ಕವಿಗಳ ಕವಿತೆ ವ ವಚನ ವಾಚನ ಮಾಡುವ ಸ್ಪರ್ಧೆಯ ನಿರ್ಣಾಯಕರಾಗಿ ಮಾತನಾಡುತ್ತಾ ಸ್ಪರ್ಧಾ ನಿಯಮಗಳನ್ನು ಅಚ್ಚುಕಟ್ಟಾಗಿ ಹೇಳಿದರು. ತಮ್ಮ ಸ್ವರಚನೆಯ ‘ಭಾರತ ಸಂವಿಧಾನ – ವರದಾನ’ ಎಂಬ ಕವಿತೆಯನ್ನು ವಾಚಿಸಿ ವಿದ್ಯಾರ್ಥಿಗಳಿಗೆ ಕವನ ಬರೆಯುವ ಮತ್ತು ಓದುವ ಶೈಲಿಯ ಬಗ್ಗೆ ಮಾರ್ಗದರ್ಶನ ನೀಡಿದರು.

೧೨ ಕ್ಲಸ್ಟರ್ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧಿಸಿದ ಮಕ್ಕಳಲ್ಲಿ ಘಂಟಿಕೇರಿಯ ನೇತಾಜಿ ಸನಿವಾಸ ಸರಕಾರಿ ಶಾಲೆಯ ೭ನೇ ವರ್ಗದ ವಿದ್ಯಾರ್ಥಿನಿ ಭಾಗ್ಯಲಕ್ಷ್ಮೀ ಬಸವರಾಜ ಅಡನ್ನೂರ ಕವಿ ಡಿ. ಎಸ್. ಕರ್ಕಿ ವಿರಚಿತ ‘ಹಚ್ಚೇವು ಕನ್ನಡ ದೀಪ’ ಕವಿತೆಯನ್ನು ಸ್ಪಷ್ಟ ಉಚ್ಚಾರ ಹಾವ ಭಾವಸಹಿತ ವಾಚಿಸಿ ಪ್ರಥಮ ಸ್ಥಾನ ಪಡೆದು ಧಾರವಾಡ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ವಿಭಾಗದ ಕವನ ವಾಚನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆಂದು ತೀರ್ಪುಗಾರರಾದ ಶಿಕ್ಷಕ ಕವಿ ಸುಭಾಷ್ ಚವ್ಹಾಣ ಹೇಳಿದರು. ಚೆನ್ನಪೇಟೆಯ ಜಿಹ್ವೇಶ್ವರ ಶಾಲೆಯ ವಿದ್ಯಾರ್ಥಿನಿ ನಿಸರ್ಗ ಚಿಂಚಲಿ ದ್ವೀತಿಯ ಸ್ಥಾನವನ್ನು ಹಾಗೂ ಪ್ರಥಮ ರಾಷ್ಟ್ರಕವಿ ಎಂ. ಗೋವಿಂದ ಪೈಯವರ ‘ತಾಯಿ ಬಾರ ಮೊಗವ ತೋರ’ ಕವಿತೆಯನ್ನು ವಾಚಿಸಿ ತೃತೀಯ ಸ್ಥಾನಕ್ಕೆ ಭಾಜನಳಾದಳು.

ದೇವಿಕಾ ಪಾಟೀಲ್, ಹೆಗ್ಗೇರಿ, ನಿಕಿತಾ ನಿಂಬೋಜಿ, ಸೇಂಟ್ ಪೌಲ ಪ್ರೌಢಶಾಲೆ ನೆಹರು ನಗರ, ಅನಿತಾ ಖಾನಾಪುರ, ಜಿಎಚ್ ಪಿಕೆಜಿಎಸ್ ವೀರಾಪುರ ಓಣಿ, ಸಮರ್ಥ ಉಗರಗೋಳ ರೋಟರಿ ಆಂಗ್ಲ ಮಾಧ್ಯಮ ಶಾಲೆ ದೇಶಪಾಂಡೆ ನಗರ, ಖುಷಿ ಮೂಲಿಮನಿ, ಸಹಿಪ್ರಾಶಾಲೆ ನವ ಆಯೋಧ್ಯಾನಗರ, ಲೇಖನಾ ಬಿ, ಸೇಕ್ರೆಡ್ ಕಾನ್ವೆಂಟ್ ಶಾಲೆ, ಕೇಶ್ವಾಪೂರ, ಹರ್ಷಿತಾ ನಾಗರಾಜ ಪಠ್ಠಣ, ಶ್ರೀ ಎಸ್ ಎಸ್ ಕೆ ಶ್ರೀರಾಮ ಶಾಲೆ, ಕಮರಿಪೇಟೆ, ಮೊಹ್ಮದ್ ಜಯನ್ ಕಲಾದಗಿ, ಖಾದ್ರಿಯಾ ಹಿರಿಯ ಪ್ರಾಥಮಿಕ ಶಾಲೆ ಗೌಸಿಯಾ ಟೌನ್ ಇವರು ಕನ್ನಡದ ಪ್ರಸಿದ್ಧ ಕವಿಗಳ, ವಚನಕಾರರ ರಚನೆಯ ಪದ್ಯ ವ ವಚನಗಳನ್ನು ವಾಚಿಸಿ

ಮತ್ತೋರ್ವ ತಿರ್ಪುಗಾರರಾದ ಸಹಿಪ್ರಾಶಾಲೆ ಶಾಲೆ ನೇಕಾರನಗರ ಕಾಲೋನಿಯ ಶಿಕ್ಷಕಿ ಕವಯತ್ರಿ ತೇಜಾವತಿ ಎಚ್. ಡಿ ಯವರು ತಮ್ಮ ಸ್ವರಚನೆಯ ‘ಗುಲ್ ಮೊಹರ್’ ಕವಿತೆಯನ್ನು ವಾಚನ ಮಾಡಿ ವಿದ್ಯಾರ್ಥಿಗಳಿಗೆ ಕವನ ವಾಚನ ಮಾಡುವ ಶೈಲಿಯನ್ನು ತೋರಿಸಿದರು. ಮಗದೋರ್ವ ತೀರ್ಪುಗಾರರಾದ ಸಹಿಪ್ರಾಶಾಲೆ ರಣದಮ್ಮ ಕಾಲೋನಿಯ ಶಿಕ್ಷಕ ಗಾಯಕರಾದ ಎಮ್. ಎಸ್ ಗೊರವರರವರು ಸ್ಪರ್ಧಾ ವಿದ್ಯಾರ್ಥಿಗಳು ವಾಚನ ಮಾಡುವ ಕವಿತೆಗಳನ್ನು ಪರೀಶೀಲಿಸಿ ನೈಜತೆಯನ್ನು ಖಚಿತಪಡಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಕವಿ ರಾಮಚಂದ್ರ ಪತ್ತಾರ, ಶಿಕ್ಷಕ ಮೃತ್ಯುಂಜಯರವರು ಪ್ರಶಸ್ತಿ ಪತ್ರವನ್ನು ವಿತರಿಸಿ ಶುಭ ಕೋರಿದರು.

ಕೊಳಚೆ ನಿರ್ಮೂಲನೆ ಮಂಡಳಿಯ ಅಧ್ಯಕ್ಷರು ಶಿಕ್ಷಣ ಪ್ರೇಮಿ ಶಾಸಕರಾದ ಮಾನ್ಯ ಪ್ರಸಾದ ಅಬ್ಬಯ್ಯನವರು, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಹೆಚ್. ಎಮ್. ಫಡ್ನೇಶಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಅನಸೂಯಾ ಎಕ್ಕುಂಡಿ, ಶಿಕ್ಷಕರ ಸಂಘದ ಅಧ್ಯಕ್ಷರಾದ ಎಮ್.ಎಚ್. ಜಂಗಳಿ, ಎಮ್.ಯು. ಶಿರಹಟ್ಟಿ, ಸಂಘಟನಾ ಶಾಲೆಯ ಮುಖ್ಯೋಪಾಧ್ಯಾಯರಾದ ಹೂಮೇರಾ ಪಠಾಣ, ಶಿಕ್ಷಣ ಸಂಯೋಜಕರಾದ ವನಿತಾ ಆರ್, ಪ್ರವೀಣ, ಉಸ್ತುವಾರಿ ಸಂಪನ್ಮೂಲ ಶಿಕ್ಷಕಿಯರಾದ ತಬಸುಮ್ ಪಟ್ಟಣದ, ವಿಜಯಲಕ್ಷ್ಮಿ, ಬಿಆರ್ಪಿಗಳಾದ ಭೀಮಸಿ ಅಂಬೀಗೇರ, ಗೆದಗೇರಿ, ರವಿ ಬಂಗೇನವರ, ಮೋತಿಲಾಲ್ ರಾಠೋಡ, ಸೈನಾಭಿ ನದಾಫ ಮುಂತಾದ ಮಹನೀಯರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಸುಹೇಚ ಪರಮವಾಡಿ,

LEAVE A REPLY

Please enter your comment!
Please enter your name here