ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ: ಡಿಜಿಟಲ್‌ ಯುಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ– ವಿಶೇಷ ಉಪನ್ಯಾಸ ಕಾರ್ಯಕ್ರಮ

0
39

ಮೂಡುಬಿದಿರೆ ಶ್ರೀ ಮಹಾವೀರಕಾಲೇಜಿನಲ್ಲಿಐ.ಕ್ಯೂ.ಎ.ಸಿ,ರಾಜ್ಯಶಾಸ್ತç ವಿಭಾಗ ಮತ್ತು ಮಾನವ ಹಕ್ಕುಗಳ ಸಂಘಇವುಗಳ ಸಹಯೋಗದಲ್ಲಿಡಿಜಿಟಲ್‌ಯುಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ– ವಿಶೇಷ ಉಪನ್ಯಾಸಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಹ ಪ್ರಧ್ಯಾಪಕರು ಹಾಗೂ ಅಧ್ಯಕ್ಷರು, ರಾಜಕೀಯ ಶಾಸ್ತç ವಿಭಾಗ, ಸ್ನಾತಕೋತ್ತರಅಧ್ಯಯನ ಮತ್ತು ಸಂಶೋಧನಾಕೇAದ್ರ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯಡಾ. ಮೋಹನದಾಸ್ ಕೆ ಇವರು ಭಾಗವಹಿಸಿ, “ಇಂದಿನ ಡಿಜಿಟಲ್‌ಯುಗದಲ್ಲಿತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ, ಮಾನವ ಹಕ್ಕುಗಳ ಉಲ್ಲಂಘನೆ ಹೊಸ ರೂಪದಲ್ಲಿ ಹೆಚ್ಚುತ್ತಿದೆ, ಸಾಮಾಜಿಕ ಮಾಧ್ಯಮಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ÷್ಯದ ನಿರ್ಬಂಧ, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವಆನ್ಲೆöÊನ್ ಹಿಂಸೆ, ಆರ್ಥಿಕ ವಂಚನೆಗಳು ಮಾನವ ಹಕ್ಕುಗಳ ಮೇಲೆ ನೇರ ದಾಳಿ ಮಾಡುತ್ತಿವೆ. ಈ ಹಿನ್ನಲೆಯಲ್ಲಿಡಿಜಿಟಲ್ ಸಾಕ್ಷರತೆ ಹೆಚ್ಚಿಸುವುದು ಮತ್ತು ಪ್ರತಿಯೊಬ್ಬರು ನೈತಿಕವಾಗಿ ಹಾಗೂ ಜವಾಬ್ದಾರಿಯುತವಾಗಿತಂತ್ರಜ್ಞಾನ ಬಳಸುವುದು ಅತ್ಯಂತಅಗತ್ಯ, ಡಿಜಿಟಲ್‌ಜಗತ್ತಿನಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸುವುದುಎಲ್ಲರಕರ್ತವ್ಯ”ಎಂದರು. ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಮಾತನಾಡಿ, ಸಮಾಜದಲ್ಲಿಉತ್ತಮಉದ್ಯೋಗ ಪಡೆಯಲುಡಿಜಿಟಲ್ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಾವಶ್ಯಕ, ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರವೀಣ್ ಭಂಡಾರಿಯವರುಕಾರ್ಯಕ್ರಮವನ್ನು ಉದ್ಧೇಶಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿಕಾಲೇಜಿನ ನಿವೃತರಾಜ್ಯಶಾಸ್ತç ವಿಭಾಗದ ಪ್ರಾಧ್ಯಾಪಕರಾದಜಯಪ್ರಕಾಶ್ ಮಾವಿನಕುಳಿ ಪದವಿಪೂರ್ವಕಾಲೇಜಿನ ಪ್ರಾಂಶುಪಾಲೆ ಲೆಫಿû್ಟನೆಂಟ್ ವಿಜಯಲಕ್ಷಿ÷್ಮ, ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ, ಮಾನವ ಹಕ್ಕುಗಳ ಸಂಘದ ಕಾರ್ಯದರ್ಶಿ ಫ್ಲೋರಿನ್, ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದರಕ್ಷಿತಾ ಸ್ವಾಗತಿಸಿ, ಫ್ಲೋರಿನ್ ವಂದಿಸಿ, ಸಾಕ್ಷಿ ನಿರೂಪಿಸಿದರು.

LEAVE A REPLY

Please enter your comment!
Please enter your name here