ಮುಲ್ಕಿ: ಶಿರ್ವ ಮುಲ್ಕಿಸುಂದರ್ ರಾಮ್ ಶೆಟ್ಟಿ ಕಾಲೇಜ್ ಕಾಲೇಜಿನ ಕೈತೋಟದಲ್ಲಿ ಹಣ್ಣು ಹಂಪಲು ಹಾಗೂ ಔಷಧೀಯ ಗಿಡಗಳಿಗೆ ಕಬ್ಬಿಣದ ತಡೆ ಬೇಲಿ ನಿರ್ಮಿಸಿ ನೀಡಲಾಯಿತು ಅಲ್ಲದೆ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಪರಿಸರಕ್ಕೆ ಆಗುವ ಹಾನಿ ಹಾಗೂ ಪರಿಹಾರ ಉಪಾಯಗಳು ಬಗ್ಗೆ ಸಂಪನ್ಮೂಲ ವ್ಯಕ್ತಿಯಾದ ಪ್ರಶಾಂತ್ ಶರ್ಮ ರಿಂದ ಮಾಹಿತಿ ಶಿಬಿರ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಪ್ರತಿಭಾ ಹೆಬ್ಬಾರ್ ಸಂಪನ್ಮೂಲ ವ್ಯಕ್ತಿಯಾದ ಪ್ರಶಾಂತ್ ಶರ್ಮ ಶಾಲಾ ಪ್ರಾಂಶುಪಾಲರಾದ ಮಿಥುನ್ ಚಕ್ರವರ್ತಿ ಶಾಲಾ ಏನ್ ಎಸ್ ಎಸ್ ಯೋಜನಾಧಿಕಾರಿ ಡಾ. ಸೋನಾ ಎಸ್ ಸಿ ತಡೆ ಬೇಲಿ ಪ್ರಯೋಜಕರಾದ ಕೋಶಾಧಿಕಾರಿ ಸಂತೋಷ ಕುಮಾರ ಮೊದಲಾದವರು ಹಾಜರಿದ್ದರು.

