ವಿಶ್ವ ಹಿಂದೂ ಪರಿಷತ್” ಬಜರಂಗದಳ ಬೆಳ್ತಂಗಡಿ ಪ್ರಖಂಡದ ಸತ್ಸoಗ ಪ್ರಮುಖ್ ಅಶೋಕ್ ಕಳೆoಜ ಅವರು ಗಾಯಗೊಂಡಿದ್ದು ಅವರ ಮನೆಗೆ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಭೇಟಿ ನೀಡಿ ಆರ್ಥಿಕ ಸಹಾಯ ಮಾಡಿದರು.

ಶಿಶಿಲ ಗ್ರಾಮದ ಕಂಚಿನಡ್ಕ ಶ್ರೀ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ ಧಾರ್ಮಿಕ ಮುಖಂಡರು ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ದೀಪ ಬೆಳಗಿಸಿ ಅಜ್ಜನ ಅಭಯಕ್ಕಾಗಿ ಪ್ರಾರ್ಥಿಸಿದರು.

ಧರ್ಮಸ್ಥಳ, ಕನ್ಯಾಡಿ ಗ್ರಾಮದ ಶ್ವೇತಾ ಮತ್ತು ಶ್ರೀ ಹರೀಶ್, ಕೂರ್ಮಣಿಯವರ ನೂತನ ಮನೆ ‘ಶಿವ ಕೃಪಾ’ ಇದರ ಗ್ರಹಪ್ರವೇಶ ಹಾಗೂ ಸತ್ಯನಾರಾಯಣ ಪೂಜಾ ಕೈoಕರ್ಯದಲ್ಲಿ ಧಾರ್ಮಿಕ ಮುಖಂಡರು ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಪಾಲ್ಗೊಂಡು ಶುಭಹಾರೈಸಿದರು.

