ಈ ವಿಶೇಷ ನಾಟಕದ ಉದ್ಘಾಟನೆ ಮಾಡಲಿದ್ದಾರೆ ಬೋಳ ಪ್ರಶಾಂತ್ ಕಾಮತ್
ಕಾರ್ಕಳದ ನಾಟಕ ಅಭಿಮಾನಿಗಳಿಗೆ ನವೆಂಬರ್ 30 ಆದಿತ್ಯವಾರ ಸಂಜೆ 6.30ಕ್ಕೆ ಆನೆಕೆರೆ ನವಜ್ಯೋತಿ ಮೈದಾನದಲ್ಲಿ ಶಾರದಾ ಆರ್ಟ್ಸ್ ಮತ್ತು ಐಸಿರಿ ಕಲಾವಿದರ ಅಭಿಮಾನಿ ಬಳಗವು ಭಜರಂಗ ಬಲಿ ನಾಟಕ ಪ್ರದರ್ಶನ ಮಾಡಲಿದೆ.

ಶ್ರೀಕಾಂತ್ ಭಾಗವತ್ ಇವರ ನೇತೃತ್ವದಲ್ಲಿ ನಡೆಯಲಿರುವ ಈ ನಾಟಕ ಕಾರ್ಕಳದಲ್ಲಿ ಹೊಸ ಪ್ರಯೋಗ ಆಗಿದೆ.
ನಾಳೆ ಸಾಯಂಕಾಲ ಈ ನಾಟಕ ಕಾರ್ಯಕ್ರಮವನ್ನು ಕಾರ್ಕಳ ದ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಬೋಳ ಪ್ರಶಾಂತ್ ಕಾಮತ್, ನ್ಯಾಯವಾದಿ ಶ್ರೀ ಹರಿ ಮೊಗೇರಾಯ ಹಾಗೂ ಪುರಸಭ ಸದಸ್ಯರಾದ ಸುಮಾ ಕೇಶವ್, ನವ ಜ್ಯೋತಿ ಫ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷ ರಾದ ಗೋಪಾಲ ಅಂಚನ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ̣
ವಿಶೇಷ ಕತೆ ಉಳ್ಳ ಈ ನಾಟಕ ನೋಡುವವರು ಕಾರ್ಯಕ್ರಮಕ್ಕೆ ಬರಬಹುದು.

