ರಾಷ್ಟ್ರೀಯ ಹಾಲು ದಿನ 2025
ICAR–ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ (NDRI), ದಕ್ಷಿಣ ಪ್ರಾದೇಶಿಕ ಕೇಂದ್ರ, ಬೆಂಗಳೂರು ಇಂದು “ವಿಕಸಿತ ಭಾರತ: ಸವಾಲುಗಳು, ಅವಕಾಶಗಳು ಮತ್ತು ಭಾರತೀಯ ಹಾಲು–ಹೈನುಗಾರಿಕೆ ಕ್ಷೇತ್ರದ ಮುಂದಿನ ದಾರಿ” ಎಂಬ ವಿಷಯದ ರಾಷ್ಟ್ರೀಯ ಸಂವಾದವನ್ನು ಆಯೋಜಿಸಿತು. ದೇಶದ ವಿವಿಧ ಭಾಗಗಳಿಂದ ಪ್ರಮುಖ ವಿಜ್ಞಾನಿಗಳು, ನೀತಿ–ನಿರ್ಮಾತೃಗಳು, ಶಿಕ್ಷಣತಜ್ಞರು, ಹಾಲು ಉದ್ಯಮ ತಜ್ಞರು ಮತ್ತು ಡೈರಿ ವಲಯದ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವು ರಾಷ್ಟ್ರಗೀತೆ ನಂತರ ಡಾ. ಅರಿಂದಂ ಧಲಿ, ಮುಖ್ಯಸ್ಥರು, ICAR–NDRI, SRS ಇವರ ಸ್ವಾಗತ ಭಾಷಣದಿಂದ ಆರಂಭವಾಯಿತು. ನಂತರ ದೀಪ ಪ್ರಜ್ವಲನೆ ಮತ್ತು ಭಾರತದ ಶ್ವೇತ ಕ್ರಾಂತಿಯ ಶಿಲ್ಪಿ ಡಾ. ವರ್ಘೀಸ್ ಕುರಿಯನ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಡಾ. ಸತೀಶ ಕುಲಕರ್ಣಿ, ಅಧ್ಯಕ್ಷರು, IDA–ದಕ್ಷಿಣ ವಲಯ ಅವರು ಹಾಲು–ಹೈನುಗಾರಿಕೆ ಕ್ಷೇತ್ರದ ರಾಷ್ಟ್ರೀಯ ಪ್ರಗತಿಗೆ ನೀಡುತ್ತಿರುವ ಕೊಡುಗೆಗಳನ್ನು ವಿವರಿಸಿದರು. ಗೌರವ ಅತಿಥಿ ಪ್ರೊ. ವಿ. ಪಳನಿಮುತ್ತು, ನಿರ್ದೇಶಕರು, ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆ (NIFTEM), ತಂಜಾವೂರು ಅವರು ಡೈರಿ ಮತ್ತು ಫುಡ್ ಪ್ರೊಸೆಸಿಂಗ್ ಕ್ಷೇತ್ರದಲ್ಲಿ ಹೊಸತನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಮುಖ್ಯ ಅತಿಥಿಗಳಾದ ಡಾ. ಆರ್. ಪಿ. ಅನೇಜ, ಮಾಜಿ ಅಧ್ಯಕ್ಷರು, ಇಂಡಿಯನ್ ಡೈರಿ ಅಸೋಸಿಯೇಶನ್ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕರು, NDDB ಅವರು ಸ್ಮರಣಿಕೆಯನ್ನ ಬಿಡುಗಡೆ ಮಾಡಿ ಮಾತನಾಡಿದರು. ಭಾರತದ ಹಾಲು–ಹೈನುಗಾರಿಕೆ ಕ್ಷೇತ್ರದ ಪರಿವರ್ತನಾ ಪಯಣ ಮತ್ತು ವಿಕಸಿತ ಭಾರತ ಕನಸನ್ನು ಸಾಧಿಸಲು ಅಗತ್ಯವಾದ ಕಾರ್ಯತಂತ್ರಗಳನ್ನು ಅವರು ವಿವರಿಸಿದರು. ಸಮಾರಂಭದ ಕೊನೆಯಲ್ಲಿ ICAR–NDRI, SRS ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಡಾ. ಡಿ. ಎನ್. ದಾಸ್ ಧನ್ಯವಾದ ಸಲ್ಲಿಸಿದರು.

ಉತ್ಪಾದಕತೆ ವೃದ್ಧಿ, ಶಾಶ್ವತ ಬೆಳವಣಿಗೆ ಮತ್ತು ಭಾರತೀಯ ಡೈರಿ ಕ್ಷೇತ್ರದ ಸ್ಥೈರ್ಯತೆ ಎಂಬ ವಿಷಯದ ತಾಂತ್ರಿಕ ಅಧಿವೇಶನದಲ್ಲಿ ಡಾ. ಎ. ಸಾಹು, ನಿರ್ದೇಶಕರು, ICAR–NIANP (ಅಧ್ಯಕ್ಷರು); ಡಾ. ಕೆ. ಟಿ. ಸಂಪತ್, ಮಾಜಿ ನಿರ್ದೇಶಕರು, ICAR–NIANP; ಡಾ. ಎನ್. ವಿ. ಬೆಳವಾಡಿ, ಮಾಜಿ ಕಾರ್ಯನಿರ್ವಹಣಾ ನಿರ್ದೇಶಕರು, NDDB; ಡಾ. ಆರ್. ಓ. ಗುಪ್ತ; NDDB ನ ಹಿರಿಯ ವಕ್ತಾರರು; ಡಾ. ಮಹೇಶ್ ಎಸ್. ಪಿ; ಮತ್ತು ಸಂಯುಕ್ತ ಆಯುಕ್ತರು ಹಾಗೂ ನಿರ್ದೇಶಕರು, CEAH, ಭಾರತ ಸರ್ಕಾರ, ಹೆಸರಾದಹಳ್ಳಿ, ಬೆಂಗಳೂರು ಅವರು ತಮ್ಮ ನೋಟಗಳನ್ನು ಹಂಚಿಕೊಂಡರು. ಉತ್ಪಾದಕತೆ, ಹವಾಮಾನ ಸ್ಥೈರ್ಯ, ಆಹಾರ–ಮೇವು, ತಳ ಸಂಶೋಧನೆ, ನೀತಿಗಳ ಜಾರಿಗೆ ಸಂಬಂಧಿಸಿದ ಪ್ರಮುಖ ಚರ್ಚೆಗಳು ನಡೆಯಿತು.
ಡೈರಿ ಉತ್ಪಾದನೆ, ಪ್ರೊಸೆಸಿಂಗ್, ನೀತಿ ಆಯ್ಕೆಗಳು ಮತ್ತು ಕಾರ್ಯತಂತ್ರ ಹಸ್ತಕ್ಷೇಪಗಳಲ್ಲಿ ಹೊಸತನ ಎಂಬ ವಿಷಯದ ಪೋಸ್ಟರ್ ಅಧಿವೇಶನವನ್ನು ಕೂಡ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಸಂಶೋಧನಾ ನವೀನತೆಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಿದರು.
ಈ ರಾಷ್ಟ್ರೀಯ ಸಂವಾದವು ಭಾರತದ ಹಾಲು–ಹೈನುಗಾರಿಕೆ ಕ್ಷೇತ್ರದ ಬಲವರ್ಧನೆಗೆ ಮತ್ತು ವಿಕಸಿತ ಭಾರತ 2047 ಗುರಿಯನ್ನು ಬೆಂಬಲಿಸಲು ಅಗತ್ಯವಾದ ವೈಜ್ಞಾನಿಕ ಸಂವಾದ ಮತ್ತು ನೀತಿ–ಯೋಜನೆಗೆ ಒಂದು ಮಹತ್ವದ ವೇದಿಕೆಯನ್ನು ಒದಗಿಸಿದೆ.

