ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಅಬ್ಬನಡ್ಕ ಕುಟುಂಬೋತ್ಸವ ಕಾರ್ಯಕ್ರಮ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಒಗ್ಗಟ್ಟನ್ನು ತಾಲೂಕಿನ ಬೇರೆ ಯಾವ ಸಂಘಟನೆಯಲ್ಲೂ ನೋಡಿಲ್ಲ – ಪ್ರಶಾಂತ್ ಆಚಾರ್ಯ

0
186

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 26ನೇ ವರ್ಷಾಚರಣೆಯ ಅಂಗವಾಗಿ ಇನ್ನಾ ಕುರ್ಕಿಲಬೆಟ್ಟು ಅಕ್ಷಯ ನಿಲಯದಲ್ಲಿ ಅಬ್ಬನಡ್ಕ ಕುಟುಂಬೋತ್ಸವ ಕಾರ್ಯಕ್ರಮವು ಶನಿವಾರ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಹಿಸಿದ್ದ ಟೈಮ್ಸ್ ಆಫ್ ಕಾರ್ಕಳ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಪ್ರಶಾಂತ್ ಆಚಾರ್ಯ ಮಾತನಾಡಿ ನಾನೊಬ್ಬ ಪತ್ರಕರ್ತನಾಗಿ ಸಾಕಷ್ಟು ಸಂಘ ಸಂಸ್ಥೆಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುತ್ತೇನೆ ಪ್ರತಿ ಸಲ ಪ್ರತಿ ಸಂಸ್ಥೆಯ ಕಾರ್ಯಕ್ರಮಕ್ಕೆ ಹೋದಾಗ ಬೇರೆ ಬೇರೆ ಸಂಸ್ಥೆಯಲ್ಲಿ ಅವರವರಲ್ಲೇ ಭಿನ್ನಭಿಪ್ರಾಯಗಳು ಬಂದಿರುದನ್ನು ಬಹಳಷ್ಟು ಗಮನಿಸಿದ್ದೇನೆ. ಆದರೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಕಾರ್ಕಳ ತಾಲೂಕಿನಲ್ಲೇ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರೇ ಅಬ್ಬನಡ್ಕ ಸಂಸ್ಥೆಯ ಸದಸ್ಯರ ಬಗ್ಗಟ್ಟುನ್ನು ಯಾವ ಸಂಘಟನೆಯಲ್ಲೂ ನೋಡಿಲ್ಲ ಎಂದು ಹೇಳಿದರು. ಸಂಘದ ಅಧ್ಯಕ್ಷ ಅಬ್ಬನಡ್ಕ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಯುವ ಉದ್ಯಮಿ, ಸಮಾಜ ಸೇವಕರಾದ ಇನ್ನಾ ಪ್ರೇಮ್ ಕುಲಾಲ್, ಬಿಲ್ಟಿಂಗ್ ಕಂಟ್ರಾಕ್ಟರ್ ಇನ್ನಾ ಸಂತೋಷ್ ಕುಲಾಲ್, ಹೆಬ್ರಿ ಅಮೃತ ಭಾರತಿ ವಿದ್ಯಾ ಸಂಸ್ಥೆಯ ಉಪನ್ಯಾಸಕರಾದ ವೀಣೇಶ್ ಅಮೀನ್, ಬೆಳ್ಮಣ್ಣು ನಿತ್ಯಾ ಸ್ಟುಡಿಯೋ ಮಾಲಕರಾದ ರವಿರಾಜ್ ಶೆಟ್ಟಿ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ನಿಕಟ ಪೂರ್ವಾಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ಕೀರ್ತನ್ ಪೂಜಾರಿ ಮೊದಲಾದವರಿದ್ದರು. ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಕಾರ್ಯದರ್ಶಿ ಸತೀಶ್ ಅಬ್ಬನಡ್ಕ ಸ್ವಾಗತಿಸಿದರು. ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ನಿರ್ದೇಶಕಿ ವೀಣಾ ಆಚಾರ್ಯ ಮತ್ತು ಸಹ ನಿರ್ದೇಶಕಿ ಪದ್ಮಶ್ರೀ ಪೂಜಾರಿ ಬಹುಮಾನ ವಿಜೇತರ ವಿವರ ವಾಚಿಸಿದರು. ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನಾ ಕೋಟ್ಯಾನ್ ವಂದಿಸಿದರು.

LEAVE A REPLY

Please enter your comment!
Please enter your name here