ಮುಲ್ಕಿ ಕೀರ್ತಿ ಶೇಷ ಸಾಧಕರ ಬಗ್ಗೆ ಬರೆದ ಕೃತಿ ಅಭಿನಂದನೀಯ : ಇನಾಯತ್ ಆಲಿ

0
9

ಮುಲ್ಕಿ ಕೀರ್ತಿ ಶೇಷ ಸಾಧಕರ ಬಗ್ಗೆ ಬರೆದ ಕೃತಿ ಅಭಿನಂದನೀಯ ಮುಲ್ಕಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಜನರ ಮನದಲ್ಲಿ ಅಚ್ಚಲಿಯಾಗಿ ಉಳಿದ ಕೀರ್ತಿ ಶೇಷ ವ್ಯಕ್ತಿಗಳ ಬಗ್ಗೆ ಬರೆದ ಕೃತಿ ಬಾಳ ಒಳ್ಳೆಯದಾಗಿ ಮೂಡಿಬಂದಿದೆ. ಇದಕ್ಕೆ ಅಭಿನಂದನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಹೇಳಿದರು.
ಅವರು ಮುಲ್ಕಿ ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಹೊಸ ಅಂಗಣ ಪ್ರಕಟಣಾಲಯದಲ್ಲಿ ಪ್ರಕಟದಾದ ಮುಲ್ಕಿಯ ಹರಿಶ್ಚಂದ್ರ ಪಿ. ಸಾಲಿಯಾನ್‌ರವರ ಮುಲ್ಕಿ ಕೀರ್ತಿ ಶೇಷ ಸಾಧಕರ ಕೃತಿ ಬಿಡುಗಡೆ ಮಾಡಿ ಇಂತಹ ಕೃತಿಗಳನ್ನು ಬರೆಯುವವರು ಯಾರು ಇರುವುದಿಲ್ಲ. ಸಮಾಜಕ್ಕೆ ಸೇವೆಯನ್ನು ಮಾಡಿ ಅಂತಹ ಸಾಧಕರನ್ನು ಗುರುತಿಸಿ ಹರಿಶ್ಚಂದ್ರ ಪಿ. ಸಾಲಿಯಾನ್ ಅವರು ಮಾಡಿದ ಒಂದು ಒಳ್ಳೆಯ ಕೆಲಸ ಇವರನ್ನು ಕರೆದು ಪ್ರಶಸ್ತಿ ಕೊಟ್ಟರೆ ಅದರಿಂದ ಕೃತಿ ಬರೆದವರಿಗೆ ಸಂತೋಷವಾಗುತ್ತದೆ ಎಂದು ಹೇಳಿದ್ದರು.


ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕ.ಸಾ.ಪ. ಮಾಜೀ ರಾಜ್ಯಾಧ್ಯಕ್ಷ ಡಾ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿ ಹೊಸ ಅಂಗಣ ಪತ್ರಿಕೆಗೆ ೧೦ ವರ್ಷ ತುಂಬಿದೆ. ನಿರಂತರವಾಗಿ ಪತ್ರಿಕೆಯನ್ನು ನಡೆಸಿಕೊಂಡು ಬಂದ ಸಂಪಾದಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕ.ಸಾ.ಪ. ಮಾಜೀ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮುಲ್ಕಿಯ ಖ್ಯಾತ ವೈದ್ಯ ಡಾ. ಅರುಣ್ ಕುಡ್ಡ, ಶ್ರೀ ಧನಂಜಯ ಅಂಚನ್, ಬಂಕಿ ನಾಯಕ ಇವರು ಉಪಸ್ಥಿತರಿದ್ದರು.
ಸಮಾಜ ಸೇವಕ ಕೆ ಎಂ ಕೋಟ್ಯಾನ್ ಚಿತ್ರಾಪು ಇವರು ಕೃತಿ ಪರಿಚಯ ಮಾಡಿ ಹರಿಶ್ಚಂದ್ರ ಪಿ. ಸಾಲಿಯಾನ್ ಅವರು ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಇವರಿಗೆ ಅಭಿನಂದನೆಗಳು ಎಂದು ಹೇಳಿದರು. ಸಭೆಯಲ್ಲಿ ಗೋಪಿನಾಥ ಪಡಂಗ, ವಾಸು ಪೂಜಾರಿ ಚಿತ್ರಾಪು, ಶಿವರಾಂ ಜಿ ಅಮೀನ್, ದಿನೇಶ್ ಸಾಲಿಯಾನ್ ಕೋಲ್ನಾಡು, ದಿನೇಶ್ ಶೆಟ್ಟಿ, ಜಯಪಾಲ ಶೆಟ್ಟಿ ಐಕಳ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಭಾಸ್ಕರ್ ಬಂಗೇರ ರವರನ್ನು ಪತ್ನಿ ಪುಷ್ಪಲತಾರವರ ಜೊತೆ ಗೌರವಿಸಲಾಯಿತು.

LEAVE A REPLY

Please enter your comment!
Please enter your name here