ಮಂಗಳೂರು: ಗಾಂಜಾ ಸೇವಿಸಿ ತೂರಾಡುತ್ತಿದ್ದ ವ್ಯಕ್ತಿಯ ಬಂಧನ

0
116

      ಮಂಗಳೂರು : ಕುದ್ರೋಳಿ ಗ್ರೀನ್ ಪಾರ್ಕ್ ಬಳಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂದರು ಅನ್ಸಾರಿ ರೋಡ್ ನಿವಾಸಿ ಮಹಮ್ಮದ್ ಹನೀಫ್ (42) ಬಂಧಿತ ವ್ಯಕ್ತಿ.ತೂರಾಡಿಕೊಂಡು ಹೋಗುತ್ತಿದ್ದ ಆತನನ್ನು ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

      LEAVE A REPLY

      Please enter your comment!
      Please enter your name here