ಬೆಳಕು ಸಂಸ್ಥೆಯ ವತಿಯಿಂದ ಸಾಹಿತ್ಯ-ಸಾಂಸ್ಕೃತಿಕ, ಸಂಗೀತ, ಕವಿಗೋಷ್ಟಿ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೀಡುವ ಅನೇಕ ಪ್ರಶಸ್ತಿಗಳಲ್ಲಿ, ಬೆಳಕು ಸಂಸ್ಥೆ ವತಿಯಿಂದ ನಡೆದ ಕವನ ರಚನೆ ಸ್ಪರ್ಧೆಯಲ್ಲಿ ಆಯ್ಕೆಯಾದ ಶ್ರೀಮತಿ ಯಶೋದ ಗಾಣಿಗ ಅವರ “ಕಣ್ಣೀರ ಕಥೆಯ ಕೇಳುವವರ್ಯಾರು..?” ಕವನಕ್ಕೆ ದ.ರಾ.ಬೇಂದ್ರೆ ರಾಷ್ಟ್ರ ಪ್ರಶಸ್ತಿಯನ್ನು ದಿನಾಂಕ 30.11.2025 ರ ರವಿವಾರದಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ 121ನೇ ರಾಷ್ಟ್ರಮಟ್ಟದ ಬೆಳಕು ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು. ಈ ಕವನ ಬೆಳಕಿನ ಬುತ್ತಿ ಕವನ ಸಂಕಲನದಲ್ಲಿ ಪ್ರಕಟವಾಗಿರುತ್ತದೆ. ಇವರು ಅಂಗನವಾಡಿ ಸಹಾಯಕಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅಣ್ಣಪ್ಪ ಮೇಟಿ ಗೌಡ ಹಾಗೂ ಎಲ್ಲಾ ಪಧಾದಿಕಾರಿಗಳು ಸೇರಿಕೊಂಡು ಈ ಅದ್ಭುತ ಕಾರ್ಯಕ್ರಮವನ್ನು ನೇರವೇರಿಸಿದರು.

