ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಆಶ್ರಯದಲ್ಲಿ ಗ್ರಾಹಕ ಕ್ಲಬ್ ನ ಸಂಯೋಜಕ ಶಿಕ್ಷಕರಿಗೆ ಗ್ರಾಹಕ ಶಿಕ್ಷಣದ ಒಂದು ದಿನದ ತರಬೇತಿ ಕಾರ್ಯಾಗಾರ ಡಿಶಂಬರ್ 2 ರಂದು ಮಂಗಳೂರಿನ ಬಿಜೈ ಆನೆಗುಂಡಿ ರಸ್ತೆಯ ಕಚೇರಿಯಲ್ಲಿ ನಡೆಯಿತು. ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಗೌರವಾಧ್ಯಕ್ಷರು ಎಂ.ಜೆ ಸಾಲ್ಯಾನ್ ರವರು ತಮ್ಮ ಪ್ರಸ್ತಾವನೆಯಲ್ಲಿ ಗ್ರಾಹಕ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಮಾಹಿತಿಯನ್ನು ನೀಡಿದರು. ಅದೇ ರೀತಿ ಗ್ರಾಹಕ ಕಾಯಿದೆ ಜಾರಿಗೆ ಬಂದ ಸಂಪೂರ್ಣ ಮಾಹಿತಿಯನ್ನು ಸಭೆಗೆ ನೀಡಿದರು. ಗ್ರಾಹಕ ಕ್ಲಬ್ ಗಳ ರಚನೆ, ನಿರ್ವಹಣೆ ಹಾಗೂ ಅದರ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜತೆ ಕಾರ್ಯದರ್ಶಿ ರಾಯಿ ರಾಜ್ ಕುಮಾರ್ ರವರು ನೀಡಿದರು.ಗ್ರಾಹಕ ಕಾಯಿದೆಯಲ್ಲಿ ಜಾರಿಗೆ ತರುವಲ್ಲಿರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಇರುವ ಸಾಧ್ಯತೆಗಳ ಬಗೆಗೆ ತಿಳಿಸಿದರು. ಜಿಲ್ಲಾ ಗ್ರಾಹಕ ಆಯೋಗ, ಅದರ ರಚನೆ ಕಾರ್ಯ ವ್ಯಾಪ್ತಿಗಳ ಬಗೆಗೆ ತಿಳಿಸಿ ಹೇಳಲಾಯಿತು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿ ನವೀನ್ ಕೃಷ್ಣ ಅವರು ಗ್ರಾಹಕ ವ್ಯವಹಾರಗಳ ಚಟುವಟಿಕೆಗಳು ಮತ್ತು ಆಹಾರ ಸರಬರಾಜು ಮಾಹಿತಿಯನ್ನು ಸಭಿಕರಿಗೆ ನೀಡಿದರು. ವೇದಿಕೆಯಲ್ಲಿ ಖಜಾಂಚಿ ಶ್ರೀ ಜಯಪ್ರಕಾಶ್ ರಾವ್ ಕಾರ್ಯಾಧ್ಯಕ್ಷರು ಶ್ರೀ ರಫೀಕ್ ಕುಕ್ಕಾಡಿ ಹಾಜರಿದ್ದರು. ಮಾಹಿತಿ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಸುನಂದ ಕುಂಬ್ಳೆ ಸ್ವಾಗತಿಸಿದರು. ಪತ್ರಕರ್ತ ಶ್ರೀ ರಾಯಿ ರಾಜ್ ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ನಿವೃತ್ತ ನರ್ಸ್ ಶಿಕ್ಷಕಿ ಶ್ರೀಮತಿ ಸುಮಂಗಲಾ ವಂದಿಸಿದರು

