ಕನ್ನಡ ಭಾಷೆ ಕನ್ನಡ ಪ್ರೀತಿ ಕನ್ನಡ ನುಡಿಯ ಪ್ರೇಮವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಕನ್ನಡ ಭಾಷಾ ಶಿಕ್ಷಕರ ಪಾತ್ರ ಮಹತ್ತರವಾದುದು. ಕನ್ನಡ ತರಗತಿಯೆಂದರೆ ಬರೀ ಪಾಠದ ಬೋಧನೆಯಲ್ಲ. ಅಲ್ಲಿ ಭಾಷಾ ಪ್ರಭುತ್ವ ಮತ್ತು ಸಾಹಿತ್ಯದ ಒಲವು ಬೆಳೆಯಬೇಕು. ಯುವ ಬರೆಹಗಾರರು ಸೃಜಿಸ ಬೇಕು. ಪರೀಕ್ಷೆಯಲ್ಲಿ ಕೂಡ ಒಬ್ಬ ವಿದ್ಯಾರ್ಥಿಯು ಪೂರ್ಣ ಅಂಕ ಗಳಿಸುವಲ್ಲಿ ಶಿಕ್ಷಕರ ಮಾರ್ಗದರ್ಶನವೇ ಮುಖ್ಯ ಪ್ರೇರಣೆ ಎಂದು ನಾರಾಯಣ ಗುರು ಅಭಿವೃದ್ಧಿ ನಿಗಮ ಕರ್ನಾಟಕ ಸರಕಾರ ಇದರ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಹೇಳಿದರು.
ಅವರು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಉಡುಪಿ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘ ಆಯೋಜಿಸಿದ ಸಾಧಕ ಶಿಕ್ಷಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟನಾ ಮಾತನಾಡಿದರು.
ಸಮಾರಂಭದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಲತಾ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಮಾತಾನಾಡುತ್ತಾ ಕನ್ನಡ ಭಾಷೆಯನ್ನು ಬೆಳೆಸುವುದೆಂದರೆ ಭಾಷೆಯ ಗೌರವವನ್ನು ಹೆಚ್ಚಿಸುವುದು.ಶಿಕ್ಷಣದಲ್ಲಿ ಮಾತೃಭಾಷೆಗೆ ಮೊದಲ ಆದ್ಯತೆಯನ್ನು ನೀಡುವುದು. ಒಳ್ಳೆಯ ಸಾಹಿತ್ಯ ಕೃತಿಗಳನ್ನು ಓದುವಂತೆ ಮತ್ತು ಬರೆಯುವಂತೆ ನಾವೆಲ್ಲರೂ ಪ್ರೋತ್ಸಾಹಿಸುವುದು ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ ಪ್ಯಾರಾದೀಪ್ ಫಾಸ್ಫೇಟ್ ಮಂಗಳೂರು ಇದರ ಜಂಟಿ ಪ್ರಧಾನ ವ್ಯವಸ್ಥಾಪಕ ಕೀರ್ತನ್ ಕುಮಾರ್ ರವರು ಮಾತಾನಾಡಿ ಉದ್ಯೋಗಕ್ಕೆ ಮಾತ್ರ ಕಲಿತರೆ ಉದ್ಯೋಗ ಸಿಗಬಹುದು ಆದರೆ ಮನಸ್ಸು ಆಹ್ಲಾದತೆಯಿಂದ ಕೂಡಿರಲು ಸಂಗೀತ ಸಾಹಿತ್ಯ ಲಲಿತ ಕಲೆಗಳಲ್ಲಿ ಒಲವಿರಬೇಕು. ಇವೆಲ್ಲವುಗಳ ಆಸಕ್ತಿಗೆ ಕನ್ನಡ ಪ್ರೀತಿ ಇರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿರಸಿ ಜಿಲ್ಲಾ ಶಿಕ್ಷಣ ಸಂಸ್ಥೆ ಉಪನ್ಯಾಸಕ ರಾಜ್ಯ ಸಂಪನ್ಮೂಲ ವ್ಯಕ್ತಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಪರಮೇಶ್ವರ ಭಾಗ್ವತ್ ರವರಿಗೆ ಸಂಘವು ಕನ್ನಡ ಜ್ಞಾನ ನೇಸರ ಎಂಬ ಬಿರುದು ನೀಡಿ ಗೌರವಿಸಿ ಅಭಿನಂದಿಸಲಾಯಿತು. ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಮತ್ತು ಪೂರ್ಣ ಅಂಕ ಗಳಿಸಿದ ವೇದಿಕೆಯಲ್ಲಿ ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉಡುಪಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವಥ್ ಎಸ್ ಎಲ್ ರವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಸಾಹಿ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮಾಳ ರವರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ ವಿ ಆನಂದ ಸಾಲಿಗ್ರಾಮ ವಹಿಸಿದ್ದರು. ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಗಣೇಶ್ ಜಾಲ್ಸೂರು ಸ್ವಾಗತಿಸಿ, ದೇವದಾಸ್ ಕೆರೆಮನೆ ನಿರೂಪಿಸಿ ವಿಜಯ ಹೆಗಡೆ ಪ್ರಾರ್ಥಿಸಿದರು ರಾಜೀವ್ ಶೇಡಿಮನೆ ವಂದಿಸಿದರು. ಸಮಾರಂಭದಲ್ಲಿ ವಲಯವಾರು ಅಧ್ಯಕ್ಷರುಗಳಾದ ರಮೇಶ್ ಕುಲಾಲ್ ಮಾಲತಿ ಶಕುಂತಲಾ ಮಹೇಶ್ ಬೈಕಾಡಿ ಸುಭೀಕ್ಷಾ ಸಹಕರಿಸಿದರು. ಬೈಂದೂರು ಕುಂದಾಪುರ ಬ್ರಹ್ಮಾವರ ಕಾಪು ಉಡುಪಿ ಕಾರ್ಕಳ ವಲಯದ ಪ್ರೌಢ ಶಾಲಾ ವಿಭಾಗದ ಕನ್ನಡ ಭಾಷಾ ಶಿಕ್ಷಕರು ಭಾಗವಹಿಸಿದ್ದರು.

