ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿ , ದ್ವಿಚಕ್ರ ವಾಹನ ಮತ್ತು 10 ಗ್ರಾಂ ಎಂಡಿಎಂಎ ವಶ ಪಡಿಸಿಕೊಂಡಿದ್ದಾರೆ. ಪುತ್ತೂರು ತಾಲೂಕಿನ ಕಬಕ ಉಮ್ಮರ್ ಫಾರೂಕ್ (41) ಬಂಧಿತ ಆರೋಪಿಯಾಗಿದ್ದಾನೆ. ಕಬಕ ಗ್ರಾಮದ ಮುರದ ರೈಲ್ವೆ ಸೇತುವೆ ಬಳಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯಂತೆ ಪುತ್ತೂರು ನಗರ ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ದಾಳಿ ನಡೆಸಿತ್ತು , ಈ ವೇಳೆ ಉಮ್ಮರ್ ಫಾರೂಕ್ ಎಂಬಾತ ಕಂಡು ಬಂದಿದ್ದು , ಆತನ ದ್ವಿಚಕ್ರ ವಾಹನ ಮತ್ತು ಕೈಯಲ್ಲಿದ್ದ ವಸ್ತುಗಳನ್ನು ತಪಾಸಣೆ ನಡೆಸಿದ ವೇಳೆ, ಮಾರಾಟಕ್ಕೆ ಇಟ್ಟಿದ್ದ 10ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

