ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹೆಬ್ರಿ ತಾಲೂಕು ಇವರ ನೇತೃತ್ವದಲ್ಲಿ ಕ್ರೀಡಾ ಭಾರತಿ ಉಡುಪಿ ಜಿಲ್ಲೆ ಮತ್ತು ಹೆಬ್ರಿ ತಾಲೂಕು ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಹೆಬ್ರಿ ಅಮೃತ ಭಾರತಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಚಾಂಪಿಯನ್ಶಿಪ್ ಟ್ರೋಫಿ 2025 ರ ಸಮರೋಪ ಸಮಾರಂಭ ನಡೆಯಿತು. ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹೆಬ್ರಿ ತಾಲೂಕು ಸಂಚಾಲಕರಾದ ಸೀತಾ ನದಿ ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಪುತ್ರನ್ ಕಾರ್ಯದರ್ಶಿ ಪ್ರಾಣೇಶ್ ಮಾಜಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಸುವರ್ಣ ಹೆಬ್ರಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹರ್ಷ ಶೆಟ್ಟಿ ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ ಖಜಾಂಚಿ ರಾಜಾರಾಮ್ ಶೆಟ್ಟಿ, ರೆಫ್ರಿ ಬೋರ್ಡ್ ಚೇರ್ಮನ್ ಶಶಿಧರ್ , ಭರತ್ ಅಮೃತ ಭಾರತಿ ಪ್ರಾಂಶುಪಾಲ ಅರುಣ್ ಹೆಚ್ ವೈ ಸದಸ್ಯರಾದ ಜನಾರ್ದನ್ ಸುರೇಶ್ ಭಂಡಾರಿ, ಶೋಧನ್ ಸೀತಾನದಿ, ಶಂಕರ್ ಶೇರಿಗಾರ್ ವಿವಿಧ ತಾಲೂಕುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು ವಿಜೇತರಿಗೆ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಬೈಂದೂರು ತಾಲೂಕು ಕಾರ್ಯದರ್ಶಿ ಕಿಶೋರ್ ಬಹುಮಾನ ವಿತರಿಸಿದರು. ಪ್ರಸಾದ್ ಹೆಬ್ರಿ ಕಾರ್ಯಕ್ರಮ ನಿರೂಪಿಸಿ ವಂದಸಿದರು.
ಫಲಿತಾಂಶ:
20ರ ವಯೋಮಾನದ ಬಾಲಕಿಯರು
ಪ್ರಥಮ : ಕಾಪು
ದ್ವಿತೀಯ : ಕುಂದಾಪುರ
ತೃತೀಯ : ಉಡುಪಿ
ಚತುರ್ಥ : ಬೈಂದೂರು
20ರ ವಯೋಮಾನದ ಬಾಲಕರು
ಪ್ರಥಮ : ಕುಂದಾಪುರ
ದ್ವಿತೀಯ : ಕಾಪು
ತೃತೀಯ : ಬೈಂದೂರು ಚತುರ್ಥ : ಹೆಬ್ರಿ
ಸೀನಿಯರ್ ಪುರುಷರ ವಿಭಾಗ
ಪ್ರಥಮ : ಕುಂದಾಪುರ ದ್ವಿತೀಯ : ಕಾಪು
ತೃತೀಯ : ಬೈಂದೂರು ಚತುರ್ಥ : ಬ್ರಹ್ಮಾವರ

