ಮುಲ್ಕಿ:ಕಿನ್ನಿಗೋಳಿ ಮುಂಡ್ಕೂರು ಹೆದ್ದಾರಿಯ ದಾಮಸ್ ಕಟ್ಟೆ ಚರ್ಚ್ ಬಳಿ ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಚೇಳಾಯರು ನಿವಾಸಿ ಸುರೇಶ್ ರಾವ್ (61) ಎಂದು ಗುರುತಿಸಲಾಗಿದೆ. ಗಾಯಾಳು ಸುರೇಶ್ ರಾವ್ ಮುಂಡ್ಕೂರು-ಕಿನ್ನಿಗೋಳಿ ಹೆದ್ದಾರಿಯಲ್ಲಿ ತಮ್ಮ ಸ್ಕೂಟರ್
(ಕೆಎ-19- ಎಚ್ಎಸ್-4648) ನಲ್ಲಿ ಮುಂಡ್ಕೂರು ಕಡೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಸಂದರ್ಭ ದಾಮಸ್ ಕಟ್ಟೆ ಚರ್ಚ್ ಬಳಿ ಕಿನ್ನಿಗೋಳಿ ಹೋಗುವ ಅಡ್ಡ ರಸ್ತೆಗೆ ತೆರಳಲು ಇಂಡಿಗೇಟರ್ ಹಾಕಿ ನಿಧಾನವಾಗಿ ಸ್ಕೂಟರ್ ನ್ನು ಬಲಗಡೆಗೆ ತಿರುಗುವ ಸಂದರ್ಭ ಕಾರು ಚಾಲಕ ನಾಗರಾಜ್ ರವರ ನಿರ್ಲಕ್ಷತನದ ಚಾಲನೆಯಿಂದ ಹಿಂದಿನಿಂದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ
.ಅಪಘಾತದಿಂದ ಸುರೇಶ್ ರಾವ್ ರವರು ಸ್ಕೂಟರ್ ಸಮೇತ ರಸ್ತೆಗೆ ಗಂಭೀರ ಸ್ವರೂಪದ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಕಿನ್ನಿಗೋಳಿ ಕಾನ್ಸೆಟ್ಟ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುರತ್ಕಲ್ ಅರ್ಥವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಈ ಬಗ್ಗೆ ಗಾಯಾಳು ಪುತ್ರ ವಿಘ್ನೇಶ್ ರಾವ್ ನೀಡಿದ ದೂರಿನಂತೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

