ನಿಟ್ಟೆ ಬಜಕಳದಲ್ಲಿ ಪರಿಸರ ಜಾಗೃತಿ, ಹಣ್ಣಿನ ಗಿಡ ವಿತರಣೆ, ಗಿಡ ನೆಡುವ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ

0
89

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಪರಿಸರದ ಬಗ್ಗೆ ಕಾಳಜಿಯನ್ನು ವಹಿಸಿದರೆ ಮುಂದಿನ ಭವಿಷ್ಯದ ಮಕ್ಕಳಿಗೆ ಆರೋಗ್ಯದ ಮೇಲೆ ಬೀರುವ ಪರಿಣಾಮಕಾರಿಯಾದಂತ ಮಾರಕ ರೋಗಗಳು ಬಾರದಿರಲು ಸಾಧ್ಯವಾಗುತ್ತದೆ ಎಂದು ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ಸುರತ್ಕಲ್ ಇವರು ಹೇಳಿದರು.
ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ಸುರತ್ಕಲ್ ಇವರ ಮುಂದಾಳತ್ವದಲ್ಲಿ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್, ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಬೋಳ, ಛತ್ರಪತಿ ಫೌಂಡೇಶನ್, ಕಾರ್ಕಳ, ರೋಟರಿ ಸಮುದಾಯದಳ ಕೆಮ್ಮಣ್ಣು – ನಿಟ್ಟೆ, ಇವರ ಸಹಯೋಗದೊಂದಿಗೆ ಪರಿಸರ ಜಾಗೃತಿ, ಹಣ್ಣಿನ ಗಿಡ ವಿತರಣೆ, ಸನ್ಮಾನ ಕಾರ್ಯಕ್ರಮ ನಿಟ್ಟೆ ಲೆಮಿನಾಕ್ರಾಸ್ – ಬಜಕಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು.
ಪ್ರತಿಯೊಬ್ಬರೂ ಒಂದು ಗಿಡವನ್ನು ತಮ್ಮ ಮನೆಯ ಎದುರುಗಡೆ ನೆಟ್ಟಾಗ ಪರಿಸರದ ಕಾಳಜಿ ಜಾಗೃತಿಯನ್ನು ವಹಿಸಲು ಸಾಧ್ಯ ಎಂದು ಮೂಡಬಿದಿರೆ ಅರಣ್ಯ ಇಲಾಖೆಯ ಎಸಿಎಫ್‌ಓ ಪಿ. ಶ್ರೀಧರ್ ಅವರು ಹೇಳಿದರು.
ಕಾರ್ಕಳದಲ್ಲಿ ಬ್ರಿಗೇಡಿಯರ್ ಐ.ಎನ್.ರೈ (ನಿವೃತ್ತರು) ಮತ್ತು ಪ್ರಗತಿಪರ ಸಾವಯವ ತರಕಾರಿ ಕೃಷಿಕರು ಸಮಾಜಸೇವಕರಾದ ನಿಟ್ಟೆಗುತ್ತು ಜಯರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರ್ಕಳ ಛತ್ರಪತಿ ಫೌಂಡೇಶನ್‌ನ ಅಧ್ಯಕ್ಷರಾದ ಗಿರೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಬೋಳ ಸದಾಶಿವ ಶೆಟ್ಟಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಸುರೇಶ್ ಪೂಜಾರಿ ಅಬ್ಬನಡ್ಕ, ಬೋಳ ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ದಿನೇಶ್ ಆಚಾರ್, ನಿಟ್ಟೆ – ಕೆಮ್ಮಣ್ಣು ರೋಟರಿ ಸಮುದಾಯದಳದ ಅಧ್ಯಕ್ಷರಾದ ಗಣೇಶ್ ಭಟ್ ಕೆಮ್ಮಣ್ಣು, ಮಹಾಬಲ ರೈ ಅವರು ಉಪಸ್ಥಿತಿತರಿದ್ದರು.
ಕೆಮ್ಮಣ್ಣು ವೆಂಕಟಕೃಷ್ಣ ಭಟ್ ಅವರು ಪರಿಚಯ ಮಾಡಿದರು, ಬೋಳ ಸುಧಾಕರ ಆಚಾರ್ಯ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ವೀಣಾ ರವಿ ಆಚಾರ್ಯ ಅವರು ವಂದಿಸಿದರು.

LEAVE A REPLY

Please enter your comment!
Please enter your name here