ಹಾಸನ : ಕೊಲೆಯಾದ ಯುವಕ ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ ನಿವಾಸಿ ಮೆಕ್ಯಾನಿಕ್ ಕೀರ್ತಿ(22) ಎಂದು ತಿಳಿದು ಬಂದಿದೆ. ಕೀರ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಬಳಿಕ ದುಷ್ಕರ್ಮಿಗಳು ಆತನ ಮೃತದೇಹದ ಮುಂದೆ ಸೆಲ್ಫಿ ವೀಡಿಯೊ ಮಾಡಿ ವಿಕೃತಿ ಮೆರೆದಿದ್ದಾರೆ. ನಾವೇ ಇವನನ್ನು ಹೊಡೆದು ಕೊಂದಿದ್ದೇವೆಂದು ಮೃತದೇಹದೊಂದಿಗೆ ಸೆಲ್ಫಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವೀಡಿಯೊವನ್ನು ಆಧರಿಸಿ ಘಟನಾ ಸ್ಥಳಕ್ಕೆ ಶ್ವಾನದಳ, ಎಎಸ್‌ಪಿ ಭೇಟಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

