ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಪರೀಕ್ಷಿತ್ ಮಂದಾರ ಆಚಾರ್ ರಾಜ್ಯಮಟ್ಟಕ್ಕೆ ಆಯ್ಕೆ

0
129

ಹೆಬ್ರಿ : ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ವತಿಯಿಂದ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮತ್ತು ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಸಹಕಾರದಲ್ಲಿ ಮಂಗಳವಾರ ನಡೆದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ೨೦೨೫-೨೬ ರಲ್ಲಿ ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಪರೀಕ್ಷಿತ್ ಮಂದಾರ ಆಚಾರ್ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಪರೀಕ್ಷಿತ್‌ ಈಗಾಗಲೇ ಹಲವಾರು ಪ್ರಶಸ್ತಿಯನ್ನು ಗಳಿಸಿದ್ದಾರೆ. ಪರೀಕ್ಷಿತ್‌ ಕೊಕ್ಕರ್ಣೆ ಸಮೀಪದ ಮಾರಾಳಿಯ ಮಂದಾರ ಆಚಾರ್‌ ವೀಣಾ ಆಚಾರ್‌ ಸುಪುತ್ರ : ಪ್ರಧಾನ ಮಂತ್ರಿ ತಾಯಿಯೊಂದಿಗೆ ಇರುವ ಚಿತ್ರ ಬಿಡಿಸಿ ಮೆಚ್ಚುಗೆ ಪಡೆದ ಪರೀಕ್ಷಿತ್ ಆಚಾರ್. ಉಡುಪಿಗೆ ಪ್ರದಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಆಗಮಿಸಿದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ತಾಯಿಯೊಂದಿಗೆ ಇರುವ ಚಿತ್ರವನ್ನು ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪತ್ರಿಕಾ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಆ ಚಿತ್ರವನ್ನು ಪ್ರಕಟಿಸಿ ಪ್ರೋತ್ಸಾಹಿಸಿದರು. ನರೇಂದ್ರ ಮೋದಿಯವರು ಉಡುಪಿಗೆ ಬಂದ ಸಂದರ್ಭದಲ್ಲಿ ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಪರೀಕ್ಷಿತ್ ಮಂದಾರ ಆಚಾರ್ ಅವರು ಬಿಡಿಸಿದ ಚಿತ್ರ ಎಲ್ಲೆಡೆಯೂ ರಾರಾಜಿಸಿತು.

LEAVE A REPLY

Please enter your comment!
Please enter your name here