ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ ಹಾಗೂ ಪಶುವೈದ್ಯ ಆಸ್ಪತ್ರೆ ಕಲ್ಲಡ್ಕ ಮತ್ತು ವೀರಕಂಭ ಗ್ರಾಮ ಪಂಚಾಯತ್ ಜಂಟಿ ಆಶ್ರಯ ದಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಶಿಬಿರ
ಕಲ್ಲಡ್ಕ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿಸೆಂಬರ್ 11 ಗುರುವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ, ಪಶುವೈದ್ಯ ಆಸ್ಪತ್ರೆ ಕಲ್ಲಡ್ಕ, ವೀರಕಂಭ ಗ್ರಾಮ ಪಂಚಾಯತ್ ಜಂಟಿ ಆಶ್ರಯ ದಲ್ಲಿ *ಸಾಕು ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಶಿಬಿರ ನಡೆಯಿತು.
ಒಟ್ಟು ಸುಮಾರು 18 ಕೇಂದ್ರಗಳಲ್ಲಿ ಸುಮಾರು 200 ಕ್ಕೂ ಅಧಿಕ ನಾಯಿಗಳಿಗೆ ರೇಬಿಸ್ ಲಸಿಕೆಯನ್ನುನೀಡಲಾಯಿತು.ಡಾ. ಕಾರ್ತಿಕ್ ಮುಖ್ಯ ಪಶು ವೈದ್ಯಾಧಿಕಾರಿಗಳು ಪಶು ಆಸ್ಪತ್ರೆ ಕಲ್ಲಡ್ಕ, ಶ್ರೀ ಮಂದಾರ ಜಾನುವಾರು ಅಧಿಕಾರಿ, ಕಲ್ಲಡ್ಕ, ಶೀನಪ್ಪ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಮೇರಮಜಲು, ವೀರಕಂಭ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ,ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೊಳಿಮಾರ್, ಪಂಚಾಯತ್ ಸದಸ್ಯರುಗಳಾದ ದಿನೇಶ್ ಪೂಜಾರಿ, ಸಿಬ್ಬಂದಿಗಳಾದ ಚಂದ್ರಹಾಸ್, ಮಿಥುನ್, ವಿನುತ, ದಿವ್ಯಜ್ಯೋತಿ, ಪಶು ಸಖಿ ಪ್ರಚೀನಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

