ವಿವೇಕಾನಂದ ಪದವಿ ಪೂರ್ವ ಕಾಲೇಜಿನ “ಮೇಧಾ 2026” – ಉಚಿತ ಶಿಕ್ಷಣ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ

0
69


 ಉಚಿತ ಶಿಕ್ಷಣಕ್ಕಾಗಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಂಡ 1000 ಕ್ಕೂ ಮಿಕ್ಕ ವಿದ್ಯಾರ್ಥಿಗಳು
 ದಕ್ಷಿಣಕನ್ನಡ, ಕಾಸರಗೋಡು, ಕೊಡಗು ಹಾಗೂ ಹಾಸನ ಜಿಲ್ಲೆಯ 8 ವಿವಿಧ ಪರೀಕ್ಷಾಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆಉತ್ತಮ ಪ್ರತಿಕ್ರಿಯೆ
 ಡಿಸೆಂಬರ್‌ಕೊನೆಯ ವಾರದೊಳಗೆ ಫಲಿತಾಂಶ ಪ್ರಕಟ
ವಿವೇಕಾನಂದ ಪದವಿಪೂರ್ವಕಾಲೇಜಿನ ವತಿಯಿಂದ ನಡೆದ ಮೇಧಾ– 2026 ಉಚಿತಶಿಕ್ಷಣ ಯೋಜನೆಯಪರೀಕ್ಷೆಗೆಅತ್ಯುತ್ತಮಪ್ರತಿಕ್ರಿಯೆದೊರೆತಿದ್ದು, ಎರಡನೇವರ್ಷನಡೆದ ಈ ಯೋಜನೆಯಲ್ಲಿ, ದಕ್ಷಿಣಕನ್ನಡ, ಕಾಸರಗೋಡು, ಕೊಡಗುಹಾಗೂಹಾಸನಜಿಲ್ಲೆಯಒಟ್ಟು 8 ಕೇಂದ್ರಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 1054 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಪುತ್ತೂರಿನ ನೆಹರು ನಗರದ ವಿವೇಕಾನಂದಆವರಣದಲ್ಲಿರುವ ವಿವೇಕಾನಂದ ಪದವಿಪೂರ್ವಕಾಲೇಜು, ಕಡಬದ ಪಂಜರಸ್ತೆಯ ವಿದ್ಯಾನಗರದಲ್ಲಿರುವ ಸರಸ್ವತಿ ಪ್ರೌಢಶಾಲೆ, ವಿಟ್ಲದ ಸಾಲೆತ್ತೂರುರಸ್ತೆಯಲ್ಲಿರುವ ಪಿ.ಎಂ. ಶ್ರೀ ಸರಕಾರಿ ಪ್ರೌಢಶಾಲೆ, ಪಾಣೆಮಂಗಳೂರಿನಲ್ಲಿರುವ ಎಸ್. ಎಲ್. ಎನ್. ಪಿ. ವಿದ್ಯಾಲಯ, ಸುಳ್ಯದ ಜಾಲ್ಸೂರಿನ ವಿನೋಬನಗರದಲ್ಲಿರುವ ವಿವೇಕಾನಂದಆAಗ್ಲಮಾಧ್ಯಮ ಶಾಲೆ, ಕೇರಳದ ಕಾಸರಗೋಡುಜಿಲ್ಲೆಯ ಬದಿಯಡ್ಕದಲ್ಲಿರುವ ಶ್ರೀ ಭಾರತಿ ವಿದ್ಯಾಪೀಠ, ಕೊಡಗುಜಿಲ್ಲೆಯ ಮಡಿಕೇರಿಯಲ್ಲಿರುವಜನರಲ್‌ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವರೋಟರಿಇಂಗ್ಲಿಷ್ ಸ್ಕೂಲ್ ಗಳಲ್ಲಿ ಈ ಪರೀಕ್ಷೆಯು ನಡೆದಿತ್ತು. ಈ ಪರೀಕ್ಷೆಯಲ್ಲಿಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 2026-27 ನೇ ಸಾಲಿನಿಂದ ಪದವಿಪೂರ್ವ ವಿಭಾಗದಲ್ಲಿ ಸಂಪೂರ್ಣಉಚಿತ ಶಿಕ್ಷಣ ದೊರೆಯಲಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನಆರಂಭಗೊAಡಿದ್ದುಡಿಸೆAಬರ್‌ಕೊನೆಯ ವಾರದೊಳಗೆ ಪರೀಕ್ಷೆಯ ಫಲಿತಾಂಶಪ್ರಕಟಗೊಳ್ಳಲಿದೆ.

LEAVE A REPLY

Please enter your comment!
Please enter your name here