ಡಿ.17ರಂದು ಬುಡಿಗಾಡಿನಲ್ಲಿ ಪ್ರಥಮ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ

0
75

ಬುಡಿಗಾಡು: ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತ ವೃಂದ ಬುಡಿಗಾಡು, ಎಕ್ಕಾರು ಶ್ರೀ ಹರಿದಾಸ ಉಡುಪ, ಶ್ರೀ ಕೃಷ್ಣ ಮಠ ಎಕ್ಕಾರು ಹಾಗೂ ಚತುರ್ವೇದಿ ವಸಂತ ಭಟ್ ನೆಲ್ಲಿತೀರ್ಥ ಇವರ ಮಾರ್ಗದರ್ಶನದೊಂದಿಗೆ ಸಾರ್ವಜನಿಕ ಶ್ರೀ ಅಯ್ಯಪ್ಪ ಭಕ್ತ ವೃಂದ ಬುಡಿಗಾಡು, ಎಕ್ಕಾರು ಇದರ ವತಿಯಿಂದ ಡಿ. 17 ನೇ ಬುಧವಾರದಂದು ಪ್ರಥಮ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ ನಡೆಯಲಿದೆ.

ಚಂದ್ರಹಾಸ ಶೆಟ್ಟಿ ಇನ್ನಾ (ಮೀರಾರೋಡ್) ಇವರ ಆಶೀರ್ವಾದದಿಂದ ಹಾಗೂ ಪ್ರಕಾಶ್ ಗುರುಸ್ವಾಮಿ ಕಾಪು ಇವರ ಉಪಸ್ಥಿತಿಯಲ್ಲಿ ಶಿಬಿರದ ಪದ್ಮನಾಭ ಗುರುಸ್ವಾಮಿ ಇವರಿಂದ ಈ ಪೂಜೆಯು ನೆರವೇರಲಿದೆ.

ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದ್ದು, ಅಭಿಷೇಕ್ ಭಂಡಾರಿ ಹಾಗೂ ಕುಟುಂಬಸ್ಥರು ಬುಡಿಗಾಡು ಇವರ ವತಿಯಿಂದ ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ಸೇವೆಯು ಜರುಗಲಿದೆ.

ಬೆಳಿಗ್ಗೆ ಗಂಟೆ 10.00 ರಿಂದ ಮಧ್ಯಾಹ್ನ ಗಂಟೆ 12.00ರ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆಯು ನಡೆಯಲಿದೆ.

ತಾವೆಲ್ಲರೂ ಪುಣ್ಯಕಾರ್ಯಕ್ರಮಕ್ಕೆ ಆಗಮಿಸಿ ಶ್ರೀ ಅಯ್ಯಪ್ಪ ದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here