ಶ್ರೀ ಮಹಾವೀರಕಾಲೇಜು, ಮೂಡುಬಿದಿರೆ ಯುವರೆಡ್‌ಕ್ರಾಸ್ ವಾರ್ಷಿಕ ವಿಶೇಷ ಶಿಬಿರ

0
55

ಶ್ರೀ ಮಹಾವೀರ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ಯುವರೆಡ್‌ಕ್ರಾಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಭೇಟಿ ನೀಡಿದಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಅಭಯಚಂದ್ರಜೈನ್ ಮಾತನಾಡಿ, “ರೆಡ್‌ಕ್ರಾಸ್‌ಎಂದರೆ ಸಮಾಜ ಸೇವೆಗೆ ಹೆಸರಾಗಿರುವ ಸಂಸ್ಥೆಯಾಗಿದ್ದು ಅದರ ಸದಸ್ಯರಾದ ವಿದ್ಯಾರ್ಥಿಗಳು ಸೇವಾ ಮನೋಭಾವ, ಸಹಾಯ ಮಾಡುವಗುಣವನ್ನು ಬೆಳೆಸಿಕೊಳ್ಳಬೇಕು . ರೆಡ್‌ಕ್ರಾಸ್‌ ಅಂತಹ ಶಿಕ್ಷಣವನ್ನು ಒದಗಿಸಿಕೊಡುತ್ತದೆ. ಇತರರ ಬದುಕು ಕೂಡಾ ನಮ್ಮಂತೆಯೇ ಎಬುವುದನ್ನು ವಿದ್ಯಾರ್ಥಿ ದೆಸೆಯಲ್ಲಿ ಅರಿತುಕೊಂಡು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಗುಣ ಬೆಳೆಸಿಕೊಳ್ಳಬೇಕು.ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರಿದ್ದಾರೆ, ಪ್ರಸ್ತುತ ವಿದ್ಯಾರ್ಥಿಗಳು ಕೂಡಾಉತ್ತಮ ಸ್ಥಾನಮಾನ ಗಳಿಸುವಂತಾಗಲಿ ಎದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಪ್ರೇಮ್‌ಚಂದ್ರ ಶೆಟ್ಟಿ, ಸಿ.ಹೆಚ್ ಗಫೂರ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಪದವಿಪೂರ್ವಕಾಲೇಜಿನ ಪ್ರಾಂಶುಪಾಲರು ಲೆಫ್ಟಿನೆಂಟ್ ವಿಜಯಲಕ್ಮ್ಷಿ , ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಪದವಿ ಕಾಲೇಜಿನಯುವರೆಡ್‌ಕ್ರಾಸ್‌ಘಟಕದಅಧಿಕಾರಿ ಶ್ರೀಗೌರಿ, ಯುವರೆಡ್‌ಕ್ರಾಸ್‌ಘಟಕದ ನಾಯಕಿ ಶ್ಲಾಘನಾ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು .

LEAVE A REPLY

Please enter your comment!
Please enter your name here