100ಕ್ಕೂ ಹೆಚ್ಚು ಹೆರಿಗೆ ನಡೆಸಿದ ಶತಾಯುಷಿ ನೀಲಮ್ಮ ವಿಧನ

0
50

ಮೊಗ್ರು : ಮೊಗ್ರು ಗ್ರಾಮ ದಂಡುಗ ನಿವಾಸಿ ದಿ. ಸೋಮಪ್ಪರವರ ಪತ್ನಿ ಶತಾಯುಷಿ ನೀಲಮ್ಮ(ಅಂದಾಜು ಪ್ರಾಯ 102) ರವರು ಡಿ. 17ರಂದು ಸ್ವಗೃಹದಲ್ಲಿ ವಯೋಸಹಜದಿಂದ ನಿಧನರಾದರು. ಮೃತರು 100 ಕ್ಕೂ ಹೆಚ್ಚು ಹೆರಿಗೆ ಕಾರ್ಯ ಮಾಡಿ ಸಮಾಜದಲ್ಲಿ ಗುರುತಿಸಿದ್ದರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು,ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಇವರ ಕಾರ್ಯವನ್ನು ಮೆಚ್ಚಿ ಮೋದಿಜೀಯ ಆಡಳಿತ ಚುಕ್ಕಾಣಿ ಹಿಡಿದು 8 ನೇ ವರ್ಷದ ಸಂಭ್ರಮದ ಅಂಗವಾಗಿ ಸೇವೆ ಸುಶಾಸನ ಬಡವರ ಕಲ್ಯಾಣ ಎನ್ನುವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಇವರ ಮೂಲಕ ನೆರವೇರಿಸಿ ಇವರನ್ನು ಸನ್ಮಾನಿಸಿದ್ದರು.ಮೃತರು ಐದು ಪುತ್ರರು, ಆರು ಪುತ್ರಿ, ಮೊಮ್ಮಕ್ಕಳು,ಅಪಾರ ಬಂಧು ಬಳಗ, ಕುಟುಂಬಸ್ಥರನ್ನು ಅಗಲಿದ್ದಾರೆ.

100ಕ್ಕೂ ಹೆಚ್ಚು ಹೆರಿಗೆ ಕಾರ್ಯಮಾಡಿ ಮತ್ತು ಹನ್ನೊಂದು ಮಕ್ಕಳನ್ನು ಹೆತ್ತ 99 ವಯಸ್ಸಿನ ಮೋಗ್ರು ಗ್ರಾಮದ ದಂಡುಗದ ಅಜ್ಜಿ ಮಾನ್ಯ ಶಾಸಕರ ಜೊತೆ .

LEAVE A REPLY

Please enter your comment!
Please enter your name here