ಐವನ್ ಡಿʼ ಸೋಜಾ ನೇತೃದಲ್ಲಿ ಮಂಗಳೂರಿನ ಜೆಪ್ಪು ಮಹಾಕಾಳಿಪಡ್ಪು ರೈಲ್ವೆಅಂಡರ್‌ಪಾಸ್ ರಸ್ತೆ ಕಾಂಗ್ರೆಸ್ ಕಾರ್ಯಕರ್ತರಿಂದ ಉದ್ಘಾಟನೆ

0
93

ಡಿಸೆಂಬರ್ 20ರಂದು ಅಂಡ್ರ‍್ಪಾಸ್ನಲ್ಲಿ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿದ ಸ್ಮರ‍್ಟ್ ಸಿಟಿ ಮತ್ತು ರೈಲ್ವೆ ಇಲಾಖೆಯ ಮಾತಿನ್ವಯ ದಿನಾಂಕ: 20-12-2025 ರಂದು 3:00 ಗಂಟೆಗೆ ಸ್ಥಳೀಯರು ಅಂಡರ್ ಪಾಸ್ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೆರಳಿದಾಗ ಕೇವಲ ಒಂದು ಭಾಗದಲ್ಲಿ ಮಾತ್ರ ಕಾಮಗಾರಿ ಮುಗಿದಿದ್ದು , ಆದರೆ ಇನ್ನೊಂದು ಭಾಗದಲ್ಲಿ ಅಂಡರ್ ಪಾಸ್ ರಸ್ತೆಯ ಕಾಮಗಾರಿ ಹಾಗೇಯೇ ಉಳಿದಿದ್ದು , ಇದನ್ನು ಕೂಡಲೇ ಮುಗಿಸುವಂತೆ ಒತ್ತಾಯಿಸಿದರು

.ಸ್ಮರ‍್ಟ್ ಸಿಟಿಯ ನಿರ್ದೆಶಕರು ಸ್ಥಳಕ್ಕೆ ಭೇಟಿ ನೀಡಿ ಇದನ್ನು ಕೂಡಲೇ ಕಾಮಗಾರಿ ಮುಗಿಸಿಕೊಡುವುದಾಗಿ ತಿಳಿಸಿದರು . ಅದರೆ ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಾದ ಐವನ್ ಡಿʼಸೋಜಾ ನೇತೃತ್ವದಲ್ಲಿ ಯಾರೂ ಒಪ್ಪದೇ ಇದ್ದಾಗ ನಮ್ಮ ವಾಹನಗಳಿಗೆ ಬಿಟ್ಟು ಕೊಡಲು ಅನುಮೋದಿಸಿದ್ದು , ಮತ್ತು ಈ ಒಂದು ಭಾಗದ ರಸ್ತೆಯಲ್ಲಿ ತಮ್ಮ ವಾಹನದ ಜೊತೆಗೆಕಾರ್ಯಕರ್ತರ ವಾಹನವನ್ನು ಜೆಪ್ಪು ಮರ‍್ಗನ್ಗೇಟ್ ಜೆಪ್ಪಿನ ಮೊಗರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ವಾಹನವನ್ನು ಸಂಚರಿಸುವ ಮೂಲಕ ರಸ್ತೆಯನ್ನು ಉದ್ಘಾಟಿಸಲಾಯಿತು. ನೂರಾರು ಕಾರ್ಯಕರ್ತರು ಘೋ಼ಣೆಯನ್ನು ಕೂಗಿದರು ಈ ಸಂದರ್ಭದಲ್ಲಿ ಐವನ್ ಡಿʼಸೋಜಾರವರು ನಮ್ಮ ಹಕ್ಕಿದೆ ಚ್ಯುತಿ ತರುವಂತಹ ಕೆಲಸವನ್ನು ನಾವು ಸಹಿಸುವುದಿಲ್ಲ, ಸಾಕಷ್ಟು ಸಮಯ ನೀಡಿದರೂ ಈ ರಸ್ತೆಯನ್ನು ನಿರ್ಮಾಣ ಮಾಡಲು ಕೇಂದ್ರ ಸರಕಾರ ಮತ್ತು ರಾಜ್ಯದ ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು ಸಂಪೂರ್ಣ ವಿಫಲರಾಗಿದ್ದಾರೆ. ಲೋಕಸಭಾ ಸದಸ್ಯರು ಈ ಬಗ್ಗೆ ಕಾಳಜಿ ವಹಿಸದೇ ಜನರನ್ನು ಇವತ್ತು ಸಂಕಷ್ಟಕ್ಕೀಡು ಮಾಡಿದ್ದಾರೆ.

ಲೋಕ ಸಭಾ ಸದಸ್ಯರು ಮತ್ತು ಶಾಸಕರು ಎನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರಲ್ಲದೇ, ನಾಳೆಯಿಂದ ಈ ಭಾಗದಲ್ಲಿ ರಸ್ತೆಗಳಲ್ಲಿ ವಾಹನಗಳಲ್ಲಿ ಸಂಚರಿಸುವ ಮೂಲಕ ಯಾವುದೇ ತೊಂದರೆಯಿಲ್ಲದೇ ಈ ರಸ್ತೆಯಲ್ಲಿ ಸಂಚರಿಸಬಹುದು ಎಂದು ಐವನ್ ಡಿʼಸೋಜಾರವರು ತಿಳಿಸಿದ್ದಾರೆ.
ಸೌತ್ ಬ್ಲಾಕ್ ಅಧ್ಯಕ್ಷರು ಸಲೀಂ, ಭಾಸ್ಕರ್ ರಾವ್ , ನವಾಜ್ ಜೆಪ್ಪು, ನೆಲ್ಸನ್ ರೋಚೆ, ಅಮೃತ್ ಕದ್ರಿ, ಮನೀಷ್ ಬೋಳಾರ್ , ಕವಿತಾ ವಾಸು, ರಮಾನಂದ ಪೂಜಾರಿ, ಸತೀಶ್ ಪೆಂಗಲ್, ಅಲ್ಟ್ಟೀನ್ ಡಿಕುನ್ಹ, ಸುಧಾಕರ್ ಜೆಪ್ಪಿಮೊಗರು, ಹೈದರ್ ಬೋಳಾರ್, ಅನಿಲ್ ರಸ್ಕೀನ್, ಚಂದ್ರಕಲಾ ಜೋಗಿ, ಪವಿತ್ರಾ, ಶಾಲಿನಿ, ಬಬಿತಾ, ನಮಿತಾ ರಾವ್, ನೀತು ಡಿಸೋಜಾ, ವಿದ್ಯಾ ಅತ್ತಾವರ್, ಟಿ.ಸಿ ಗಣೇಶ್, ಅಪ್ಪಿಲತಾ, ದಿನೇಶ್ ಪಾಂಡೇಶ್ವರ, ಹಬೀಬುಲ್ಲ ಮುಂತಾದವರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here