ಹರಿಪ್ರಸಾದ್ ರೈ ಜಿಕೆ ಮತ್ತು ವಿಶ್ವನಾಥ್ ಆಚಾರ್ಯ ಇವರಿಗೆ ತುಳುವ ಬೊಳ್ಳಿ ಬಿರುದು

0
170

ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಸಮುದಾಯ ಸಂಘಟನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯ ಪಾತ್ರವಹಿಸುತ್ತಿರುವ ತುಳುವ ಮಹಾಸಭೆ ಇಂಟರ್ನ್ಯಾಷನಲ್ ವತಿಯಿಂದ, ಮಹಾಸಭೆಯನ್ನು ಸಂಘಟಿಸುವಲ್ಲಿ ಶ್ರಮವಹಿಸಿ ನಿಗದಿತ ಮಾನದಂಡಗಳ ಆಧಾರದ ಮೇಲೆ ಸಾಧನೆಗೈದ ಸಂಚಾಲಕರಿಗೆ ನೀಡಲಾಗುವ “ತುಳುವ ಬೊಳ್ಳಿ” ಬಿರುದು ಒಂದು ಅಂತರರಾಷ್ಟ್ರೀಯ ಗೌರವವಾಗಿದ್ದು , ಈ ಬಾರಿ ವಿಶ್ವನಾಥ್ ಆಚಾರ್ಯ (ಪೆರ್ಡೂರು) ಮತ್ತು ಹರಿಪ್ರಸಾದ್ ರೈ ಜಿ.ಕೆ ಅವರಿಗೆ ಲಭಿಸಿದೆ.

ವಿಶ್ವನಾಥ್ ಆಚಾರ್ಯ ಅವರು ಉಡುಪಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಸಂಚಾಲಕರಾಗಿ, ಹಾಗೂ ಹರಿಪ್ರಸಾದ್ ರೈ ಜಿ.ಕೆ ಅವರು ಕಾರ್ಯನಿರ್ವಾಹಕ ಸಂಚಾಲಕರಾಗಿ ಕಾರ್ಯನಿರ್ವಹಿಸಿ, ಮಹಾಸಭೆಯ ಸಂಘಟನೆ, ಸದಸ್ಯರ ಸೇರ್ಪಡೆ, ಚಟುವಟಿಕೆಗಳ ವಿಸ್ತರಣೆ ಹಾಗೂ ಸಮುದಾಯ ಒಕ್ಕೂಟವನ್ನು ಬಲಪಡಿಸುವಲ್ಲಿ ಸಲ್ಲಿಸಿದ ಮಹತ್ವದ ಸೇವೆಯನ್ನು ಪರಿಗಣಿಸಿ ಈ ಅಂತರರಾಷ್ಟ್ರೀಯ ಗೌರವ ಪ್ರದಾನ ಮಾಡಲಾಗಿದೆ.

ಈ ಗೌರವ ಬಿರುದನ್ನು ಬೆಂಗಳೂರಿನ ಅಲಯನ್ಸ್ ಯುನಿವರ್ಸಿಟಿಯಲ್ಲಿ ಜನವರಿ 9 ಮತ್ತು 10, 2026 ರಂದು ನಡೆಯಲಿರುವ “ಬೆಮ್ಮರ್ ಬೊಕ್ಕ ಲೆಕ್ಕೇಸಿರಿ” ರಾಷ್ಟ್ರೀಯ ವಿಚಾರ ಸಂಕಿರಣದ ವೇದಿಕೆಯಲ್ಲಿ ಅಧಿಕೃತವಾಗಿ ಪ್ರಧಾನ ಮಾಡಲಾಗುವುದು.
ತುಳುವ ಮಹಾಸಭೆ ಇಂಟರ್ನ್ಯಾಷನಲ್ ಹಾಗೂ ತುಳುವರ್ಲ್ಡ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ ಈ ಬಿರುದು, ತುಳುನಾಡಿನ ಸಂಸ್ಕೃತಿ, ಭಾಷೆ, ಆದಿದೈವ ಪರಂಪರೆಯೊಂದಿಗೆ ತುಳುನಾಡಿನ ಕಳರಿ ವಿದ್ಯೆ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿ ಪ್ರತಿಷ್ಠಾಪಿಸುವ ಉದ್ದೇಶವನ್ನು ಹೊತ್ತಿರುವ ಗೌರವಮಯ ಅಂತರರಾಷ್ಟ್ರೀಯ ಮಾನ್ಯತೆಯಾಗಿದೆ.

LEAVE A REPLY

Please enter your comment!
Please enter your name here