ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಲ್ಲಡ್ಕ ವಲಯದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

0
92

ಮಕ್ಕಳಿಗೆ ಧರ್ಮ ಸಂಸ್ಕಾರ ತಿಳಿ ಹೇಳಿ – ಅನಂತರಾಮ್ ಐತಾಳ್.

ಕಲ್ಲಡ್ಕ : ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ ಆದರೆ ಮಾಡಿದ ಒಳ್ಳೆಯ ಕೆಲಸಗಳು ಎಂದು ಶಾಶ್ವತ, ಮಕ್ಕಳಿಗೆ ಧರ್ಮ ಸಂಸ್ಕಾರ ತಿಳಿ ಹೇಳಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗುವಂತೆ ನೋಡಿಕೊಳ್ಳಬೇಕು, ಅತಿಯಾದ ಮೊಬೈಲ್ ಬಳಕೆಯಿಂದಾಗಿ ಪರಸ್ಪರ ಬಾಂಧವ್ಯಗಳು ಕಡಿಮೆಯಾಗಿದೆ ಎಂದು ಜ್ಯೋತಿಷ್ಯ ವಿದ್ವಾನ್ ಅನಂತರಾಮ್ ಐತಾಳ್ ಹೇಳಿದರು.

ಅವರು ಡಿಸೆಂಬರ್ 21ನೇ ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟೆಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಪ್ರಗತಿ ಬಂದು ಸ್ವ- ಸಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ, ಭಜನಾ ಪರಿಷತ್ ಕಲ್ಲಡ್ಕ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಡ್ಕ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 21 ನೇ ರವಿವಾರ ಮರಾಠಿ ಸಭಾಭವನ ಪುರ್ಲಿಪಾಡಿ ಕಲ್ಲಡ್ಕ ಇಲ್ಲಿನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಡ್ಕ ವಲಯದ ಅಧ್ಯಕ್ಷರಾದ ಜಯರಾಮ್ ರೈ ಬೊಳಂತೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಜಗನ್ನಾಥ್ ಚೌಟ ಬದಿಗುಡ್ಡೆ ಉದ್ಘಾಟಿಸಿ ಮಾತನಾಡಿ ಮಹಿಳೆಯರನ್ನು ಆದರ್ಶ ಗ್ರಹಿಣಿಯಾಗಿಸುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಶ್ರಮ ಅಪಾರವಾಗಿದೆ. ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರನ್ನು ಒಂದು ಚೌಕಟ್ಟಿನ ಒಳಗೆ ತಂದು ಉತ್ತಮ ಗೃಹಿಣಿಯಾಗಿ ರೂಪಿಸುವಂತ ಯೋಜನೆಯ ಕಾರ್ಯಕ್ರಮ ಮೆಚ್ಚುವಂತದ್ದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ವಿಶೇಷವಾಗಿ ಸಹಕರಿಸುತ್ತಿರುವ ಬಟ್ಯಪ್ಪ ಶೆಟ್ಟಿ ನೆಟ್ಲ, ವೆಂಕಟರಾಯ ಪ್ರಭು ಪುರ್ಲಿಪಾಡಿ, ಸಂದೀಪ್ ಶೆಟ್ಟಿ ಅರೆಬೆಟ್ಟು, ನಾಗೇಶ್ ಕೆ ಕಲ್ಲಡ್ಕ, ಜಯಪ್ರಕಾಶ್ ತೆಕ್ಕಿಪಾಪು,ಚಿನ್ನಾ ಕಲ್ಲಡ್ಕ ಇವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ಎ ರುಕ್ಮಯ ಪೂಜಾರಿ, ಕೆ ಪದ್ಮನಾಭ ಕೊಟ್ಟಾರಿ, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಗ್ರಾಮಾಭಿವೃದ್ದಿ ಯೋಜನೆಯ ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ, ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ಜನಜಾಗೃತಿ ವೇದಿಕೆ ಅಧ್ಯಕ್ಷ ಬಟ್ಯಪ್ಪ ಶೆಟ್ಟಿ, ನೇತಾಜಿ ಯುವಕ ಮಂಡಲದ ಗೌರವಾಧ್ಯಕ್ಷ ನಾಗೇಶ್ ಕಲ್ಲಡ್ಕ, ಶ್ರೀದೇವಿ ಕಂಟ್ರಕ್ಷನ್ ಮಾಲಕ ಸಂದೀಪ್ ಶೆಟ್ಟಿ ಅರೆಬೆಟ್ಟು, ಪ್ರಗತಿಪರ ಕೃಷಿಕ ಜಯಪ್ರಕಾಶ್ ತೆಕ್ಕಿಪಾಪು, ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾದವ ಸಾಲಿಯನ್ ಕುದ್ರೆಬೆಟ್ಟು, ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ಒಕ್ಕೂಟಗಳ ಅಧ್ಯಕ್ಷರುಗಳಾದ ಸೀತಾರಾಮ್ ಶೆಟ್ಟಿ, ಮಮತಾಶೆಟ್ಟಿ ಸೀತಾ, ಶಾಂಭವಿ, ಉಮಾವತಿ , ಮಮತಾ, ಹರೀಶ್ ,ದಯಾನಂದ ಗೌಡ, ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ವಿದ್ಯಾ, ಯಶೋಧ, ವಿಜಯ, ರೇವತಿ, ಲೀಲಾವತಿ, ಸುಕನ್ಯ, ಗಣೇಶ್ ನಾಯ್ಕ ಮೊದಲಾದವರ ಉಪಸ್ಥಿತರಿದ್ದರು.

ಬೆಳಿಗ್ಗೆ ಶ್ರೀ ನೀಟಿಲಾಕ್ಷ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸಂಕೀರ್ತನೆ, ಪುರೋಹಿತರಾದ ಅನಂತರಾಮ ಐತಾಳ್ ರವರ ಪೌರೋಹಿತ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಜರಗಿತು. ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನದಾನ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಕಾರ್ಯಕ್ರಮದಲ್ಲಿ ಗ್ರಾಮ ಭಿವೃದ್ಧಿಯೋಜನೆಯ ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ಎಲ್ಲಾ ಒಕ್ಕೂಟಗಳ ಪದಾಧಿಕಾರಿಗಳು, ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರುಗಳು, ಶೌರ್ಯ ತಂಡದ ಸದಸ್ಯರುಗಳು, ಜನಜಾಗೃತಿ ವೇದಿಕೆ ಸದಸ್ಯರುಗಳು, ಭಜನಾ ಪರಿಷತ್ ನ ಸದಸ್ಯರುಗಳು ಭಾಗವಹಿಸಿದ್ದರು.
ವಿಜಯ ಪ್ರಕಾಶ್ ಪ್ರಾರ್ಥಿಸಿ,ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಯಶೋಧ ವಾರ್ಷಿಕ ವರದಿವಾಚಿಸಿ, ಜನಜಾಗ್ರತಿ ವೇದಿಕೆ ಸದಸ್ಯ ವೆಂಕಟರಾಯ ಪ್ರಭು ವಂದಿಸಿದರು. ಸಂತೋಷ್ ಕುಮಾರ್ ಬೊಲ್ಪೊಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here