ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಶಾಸಕರ ಕಛೇರಿಯಲ್ಲಿ ಮಂಗಳೂರು ನಗರದ ಕದ್ರಿ , ಉರ್ವ , ಕಂಕನಾಡಿ ಮಾರುಕಟ್ಟೆಗಳ ಅವ್ಯವಸ್ಥೆಗಳ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಇಂಜಿನಯರ್ ಗಳೊಂದಿಗೆ ಸಮಾಲೋಚನೆ ಮತ್ತು ಚರ್ಚೆ ಜನವರಿ 30 ಕ್ಕೆ ಮುಖ್ಯಮಂತ್ರಿಯನ್ನು ಕರಾವಳಿ ಉತ್ಸವದ ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಲು ನಿರ‍್ಧಾರ.
ಮಂಗಳೂರು ನಗರದ ಕದ್ರಿ , ಉರ್ವ , ಕಂಕನಾಡಿ ಮಾರುಕಟ್ಟೆಗಳ ಕಾಮಗಾರಿ ಮುಗಿದು ಅನೇಕ ವರ್ಷಗಳು ಕಳೆದರೂ ಸಾರ್ವಜನಿಕರಿಗೆ ಬಿಟ್ಟು ಕೊಡದೇ ಹಣ ಪೋಲಾಗುತ್ತಿದ್ದು , ಕಟ್ಟಡ ನಿರ‍್ಮಿಸಲು ಸಾಲಪಡೆದು ಬಡ್ಡಿಯು ಇಮ್ಮಡಿಯಾಗುತ್ತಿದ್ದು , ಈ ಬಗ್ಗೆ ಕೂಡಲೇ ಮೂರು ಮಾರುಕಟ್ಟೆಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಇರುವ ಬಗ್ಗೆ ಹಾಗೂ ಸಮಸ್ಯೆಗಳ ಮಹಾನಗರ ಪಾಲಿಕೆಯ ಅಧಿಕಾರಿಗಳಾದ ನರೇಶ್ ಶೆಣೈ ಡಿ.ಸಿಆರ್ ಅಕ್ಷತಾ, ಕಂದಾಯ ಅಧಿಕಾರಿ ವಿಜಯಕುಮಾರ್ ಹಾಗೂ AEE ರವರೊಂದಿಗೆ ಸಮಸ್ಯೆಗಳ ಸಮಾಲೋಚನೆ ನಡೆಸಿ, ಕೂಡಲೇ ಮಾರುಕಟ್ಟೆಗಳನ್ನು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಜನವರಿ 30ರಂದು ಮಂಗಳೂರಿನ ಕರಾವಳಿಉತ್ಸವದ ಸಮಾರೋಪ ಸಮಾರಂಭಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು. ನಿರ‍್ಧರಿಸಲಾಯಿತು. ಮಹಾತ್ಮ ಗಾಂಧಿ ವಿಕಾಸ ಯೋಜನೆಯ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ನೇರವೇರಿಸಲು ತಿರ‍್ಮಾನಿಸಲಾಯಿತು.
ನಗರದ ಮಹಾಕಾಳಿಪಡ್ಪುನಲ್ಲಿರುವ ಅಂರ‍್ಪಾಸ್ನ್ನು ಇನ್ನೂ ಸಾರ್ವಜನಿಕರ ಪ್ರಯಾಣಕ್ಕೆ ಅಡ್ಡಿಪಡಿಸುವ ಅಧಿಕಾರಿ ಮೇಲೆ ಕೂಡಲೇ ಕ್ರಮ ಕೈಗೊಳ್ಲದಿದ್ದರೆ , ಮಹಾಕಾಳಿಪಡ್ಪು ಅಂರ‍್ಪಾಸ್ ರೈಲ್ವೆ ಬ್ರಿಡ್ಜ್ ಬಳಿ ಪ್ರತಿಭಟನೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಐವನ್ ಡಿʼಸೋಜಾ ತಿಳಿಸಿದ್ದಾರೆ.

