ಮಲ್ಪೆ ಬೀಚ್​ನಲ್ಲಿ ವಿಗ್ರಹ ಕಂಡು ಸಂಭ್ರಮಿಸಿ ಇಸ್ಕಾನ್​ ಭಕ್ತರು

0
161


ಉಡುಪಿ: ಮಲ್ಪೆ ಕಡಲ ತೀರದಲ್ಲಿ ಕೃಷ್ಣನ ವಿಗ್ರಹ ತೇಲಿ ಬಂದು ಪವಾಡ ಸಂಭವಿಸಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.
ಇತ್ತೀಚೆಗೆ ಕೃಷ್ಣ ಮಠದಲ್ಲಿ ಇಸ್ಕಾನ್​ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಕ್ತರು ಮಲ್ಪೆ ಕಡಲ ತೀರಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ದಡದಲ್ಲಿ ಅವಳಿ ವಿಗ್ರಹಗಳು ಗಮನಸೆಳೆದಿವೆ. ಕೃಷ್ಣದೇವರು ಕೂಡ ಕಡಲಲ್ಲೇ ಲಭ್ಯವಾಗಿದ್ದು, ಭಾವುಕ ಭಕ್ತರು ಇದೇ ಪವಾಡ ಮತ್ತೊಮ್ಮೆ ಸಂಭವಿಸಿದೆ ಎಂದು ಕುಣಿದು ಸಂಭ್ರಮಿಸಿದ್ದಾರೆ. ಸಾವಿರಾರು ಇಸ್ಕಾನ್​ ಭಕ್ತರು ಆ ವಿಗ್ರಹವನ್ನು ಕೃಷ್ಣನ ವಿಗ್ರಹವೆಂದು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ. ಆದರೆ ಮೇಲ್ನೋಟಕ್ಕೆ ಇದು ಕರಾವಳಿಯಲ್ಲಿನ ದೇಗುಲಗಳ ಪ್ರವೇಶ ದ್ವಾರದ ಬಳಿ ಇರುವ ಜಯ- ವಿಜಯರ ವಿಗ್ರಹ ಎಂದು ತಿಳಿದು ಬಂದಿದೆ. ದೇವಾಲಯದಲ್ಲಿ ಭಿನ್ನಗೊಂಡ ವಿಗ್ರಹಗಳನ್ನು ಸಮುದ್ರಕ್ಕೆ ಬಿಡುವ ಪರಿಪಾಠ ಕರಾವಳಿಯಲ್ಲಿದೆ. ಈ ರೀತಿ ಮುಳುಗಿಸಿ ಬಿಟ್ಟ ಜಯ- ವಿಜಯರ ವಿಗ್ರಹವೇ ತೇಲಿ ಬಂದು ಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here