ಉಡುಪಿ : ನವದೆಹಲಿಯ ವಸಂತ್ ಕುಂಜ್ ನಲ್ಲಿರುವ ಶ್ರೀ ಮಠದ ಶಾಖೆಯಲ್ಲಿ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವ ಹಾಗೂ ಗುರು ಸಂಸ್ಮರಣ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ಕೇಂದ್ರದ ಮಾಜಿ ಸಚಿವ ಡಾ. ಮುರಳಿ ಮನೋಹರ ಜೋಶಿ, . ಶ್ರೀ ವಿಶ್ವೇಶತೀರ್ಥರು ಶ್ರೇಷ್ಠ ಸಂತರ ವಿಭೂತಿ ಸ್ವರೂಪರಾಗಿದ್ದರು. ವಿಶ್ವಹಿಂದು ಪರಿಷತ್ತಿನ ಸ್ಥಾಪನೆ ದೇಶ ವಿದೆಶಗಳಲ್ಲಿ ಅದರ ಕಾರ್ಯವ್ಯಾಪ್ತಿ ಯ ವಿಸ್ತರಣೆಗಳಲ್ಲಿ ಅವರ ಮಾರ್ಗದರ್ಶನ ಪ್ರೇರಣೆಗಳು ಅಮೂಲ್ಯವಾದವುಗಳು. ರಾಮಜನ್ಮಭೂಮಿ ಆಂದೋಲನದಲ್ಲಿ ಸಮಸ್ತ ಹಿಂದು ಸಮಾಜಕ್ಕೆ ಅವರು ನೀಡಿದ ಪ್ರೋತ್ಸಾಹ ನೇತೃತ್ವಗಳು ಅವಿಸ್ಮರಣೀಯ. ವಿವಾದಿತ ಕಟ್ಟಡ ಬಿದ್ದ ಬಳಿಕ ಅದೇ ಸ್ಥಳದಲ್ಲಿ ಬಾಲರಾಮನ ವಿಗ್ರಹವನ್ನು ಕೂಡಲೇ ಸ್ಥಾಪಿಸಲೇ ಬೇಕೆಂದು ನಮಗೆಲ್ಲ ತಿಳಿಯಪಡಿಸಿ ರಾತೋರಾತ್ರಿ ತಾತ್ಕಾಲಿಕ ಶೆಡ್ ನಿರ್ಮಿಸಿ ವಿಗ್ರಹ ಪ್ರತಿಷ್ಠಾಪನೆಗೈದವರೂ ಶ್ರೀಗಳೇ ಆಗಿದ್ದರು. ಆ ವಿಗ್ರಹವೂ ನಮಗೆ 1949 ರಲ್ಲಿ ತೀರಾ ಆಕಸ್ಮಿಕವೆಂಬಂತೆ ಆ ಸ್ಥಳದಲ್ಲಿ ದೊರೆತಿತ್ತು. ಅದು ರಾಮನೇ ನಮಗೆ ಒದಗಿಸಿದ್ದು . ಅದು ದೊರಕಿದ ಬಗೆಯೂ ಅತ್ಯಂತ ವಿಸ್ಮಯಕಾರಿಯಾದುದು. ಅಂಥ ವಿಗ್ರಹವನ್ನು ಸ್ಥಾಪಿಸಿ ಮುಂದಿನ ಹೋರಾಟಗಳಿಗೆ ಸ್ಫೂರ್ತಿ ನೀಡಿದ ಶ್ರೀಗಳನ್ನು ಹಿಂದು ಸಮಾಜ ಮರೆಯಲು ಸಾಧ್ಯವಿಲ್ಲ . ಅವರು ಕೃಶಕಾಯರಾಗಿದ್ದರೂ ವೈಶ್ವಿಕ ಸ್ವರೂಪ ಹೊಂದಿದ್ದರು ಎಂದು ಸ್ಮರಿಸಿಕೊಂಡರು.
ವಿಶ್ವ ಹಿಂದು ಪರಿಷತ್ತಿನ ದೆಹಲಿ ರಾಜ್ಯದ ಕಾರ್ಯದರ್ಶಿ ಸುರೇಂದ್ರ ಕುಮಾರ ಗುಪ್ತಾ , ಮಾಜಿ ಕುಲಪತಿ ಶಿಕ್ಷಣ ತಜ್ಞ ಡಾ ರಮೇಶ ಕುಮಾರ್ ಪಾಂಡೆ , ಕರ್ನಾಟಕ ಮೂಲಕ ಐಎ ಎಸ್ ಅಧಿಕಾರಿ ಸುಹಾಸ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀಮಠದ ವ್ಯವಸ್ಥಾಪಕ ಡಾ ವಿಠೋಬಾಚಾರ್ಯ ಪ್ರಸ್ತಾವನೆಗಳೊಂದಿಗೆ ಸ್ವಾಗತಿಸಿದರು . ವಿದ್ವಾನ್ ದೇವಿಪ್ರಸಾದ ಭಟ್ ವಂದನಾರ್ಪಸೆಗೈದರು .
ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳವರ ಪಾದುಕೆ ಮತ್ತು ಭಾವಚಿತ್ರಕ್ಕೆ ಡಾ ಜೋಶಿ ದೀಪಬೆಳಗಿ ಪುಷ್ಪಾರ್ಚನೆಗೈದು ಮಂಗಳಾರತಿ ಬೆಳಗಿ ಉದ್ಘಾಟಿಸಿದರು . ಸುರೇಂದ್ರ ಗುಪ್ತಾ ಮತ್ತು ಡಾ ಪಾಂಡೆಯವರು ಗುರುಗಳನ್ನು ಸ್ಮರಿಸಿ ಮಾತಾಡಿದರು . ವಿದ್ವಾನ್ ದೇವಿಪ್ರಸಾದ ಭಟ್ರು ವಂದಿಸಿದರು .

