ನ್ಯೂನತೆ ಸರಿಪಡಿಸಲು ಗ್ರಾಹಕ ವೇದಿಕೆ , ಆಯೋಗಗಳಿವೆ-ಸೋಮಶೇಖರಪ್ಪ ಕೆ.ಎಚ್.

0
85

ವರದಿ ರಾಯಿ ರಾಜ ಕುಮಾರ
ಗ್ರಾಹಕ ನ್ಯೂನತೆಗಳನ್ನು ಸರಿಪಡಿಸಲು 1986 ರಲ್ಲಿ ಜಾರಿಗೆ ಬಂದ ಗ್ರಾಹಕ ಹಿತ ರಕ್ಷಣಾ ಕಾಯಿದೆ 2019ರಲ್ಲಿ ವಿಶೇಷ ಸೇರ್ಪಡೆಯೊಂದಿಗೆ ನವೀಕರಿಸಲ್ಪಟ್ಟಿತು. ಆನ್ಲೈನ್ ನಲ್ಲಿ ತೆಗೆಸಿದರು ರಸಿದಿಯನ್ನು ಪಡೆದು ಗ್ರಾಹಕರು ತಮ್ಮ ಹಕ್ಕುಗಳನ್ನು ಚಲಾಯಿಸಲು ಅವಕಾಶ ಇದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯ ವಿಲೇವಾರಿ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಕೆ.ಎಚ್. ನುಡಿದರು.

ಅವರು ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮಂಗಳೂರು ಮತ್ತು ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಗ್ರಾಹಕರ ವ್ಯಾಜ್ಯ ವಿಲೇವಾರಿ ಆಯೋಗ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ರಥಭೀದಿ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕ ದಿನಾಚರಣೆಯನ್ನು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಭೀದಿ ಮಂಗಳೂರು ಇಲ್ಲಿ ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾರ್ವಜನಿಕರೆಲ್ಲರೂ ಶೀಘ್ರ ನ್ಯಾಯದಾನವನ್ನು ಪಡೆಯಲು ಸಾಧ್ಯವಿದೆ ಅದಕ್ಕಾಗಿ ಹಕ್ಕುಗಳನ್ನು ಚಲಾಯಿಸುವುದನ್ನು ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ವೇದಿಕೆಯಲ್ಲಿ ಆಹಾರ, ಗ್ರಾಹಕ ವ್ಯವಹಾರ ಇಲಾಖೆಯ ಉಪನಿರ್ದೇಶಕಿ ಅನಿತಾ ವಿ ಮಡ್ಲೂರು, ಉಪಾಧ್ಯಕ್ಷ ಎಡ್ವಿನ್ ಡಿ ಮೆಲ್ಲೋ, ಕಾಲೇಜಿನ ಪ್ರಾಂಶುಪಾಲೆ ಭಾರತಿ ಬಾಯಿ, ಜಯಪ್ರಕಾಶ್ ರಾವ್, ರಫೀಕ್ ಕುಕ್ಕಾಡಿ ಹಾಜರಿದ್ದರು.

ಗ್ರಾಹಕ ಮಾಹಿತಿ ಕೇಂದ್ರದ ಗೌರವಾಧ್ಯಕ್ಷ ಎಂ ಜೆ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಸುನಂದ ಕುಂಬ್ಳೆ ಸ್ವಾಗತಿಸಿದರು. ಶಿಕ್ಷಕಿ ಶಿಲ್ಪಾ ಪೈ ಕಾರ್ಯಕ್ರಮ ನಿರ್ವಹಿಸಿದ್ದರು. ಕಾರ್ಯದರ್ಶಿ ಸುನಂದ ದಂಬೆಕೋಡಿ ವಂದಿಸಿದರು.


LEAVE A REPLY

Please enter your comment!
Please enter your name here