ಮಹಾರಾಷ್ಟ್ರ : ಪಿಂಪರಿ-ಚಿಂಚವಾಡಿನ ಮೀನಾತಾಯಿ ಠಾಕ್ರೆ ಸಭಾಗೃಹದಲ್ಲಿ 2025 ರ ಡಿಸೆಂಬರ್ 14ರಂದು ಆಯೋಜಿಸಲಾದ ಆಹ್ವಾನಿತ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ
ಪ್ರಹಾರ್ ಮಾರ್ಷಲ್ ಆರ್ಟ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್ (ಜೆ.ಎಸ್.ಕೆ.ಎ. ಭಾರತ ಸಂಯೋಜಿತ) ವಿದ್ಯಾರ್ಥಿಗಳು ಕಾತಾ ಮತ್ತು ಕುಮಿತೆ ವಿಭಾಗಗಳಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ.
ಕಲ್ಯಾಣ ಪಶ್ಚಿಮ ( ಮುಂಬೈ), ಕಲ್ಯಾಣ ಪೂರ್ವ (ಮುಂಬೈ), ಹಾಗೂ ಠಾಕುರ್ಳಿ (ಮುಂಬೈ) ಶಾಖೆಗಳ ಒಟ್ಟು 29 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ 33 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಂಬೈ ಕಲ್ಯಾಣ ಪೂರ್ವದ ಸಿದ್ಧಿ ಕೊಟಿಯನ್ ಅವರು ಕುಮಿತೆ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ, ಅವರೊಂದಿಗೆ ಇತರ ಪದಕ ವಿಜೇತರು
• ಅಪೂರ್ವ ಧನಶೆಟ್ಟಿ – ಚಿನ್ನ (ಕುಮಿತೆ), ಬೆಳ್ಳಿ (ಕಾತಾ)
• ಅರ್ಣವ್ ಬೋನ್ಹಾಡೆ – ಚಿನ್ನ (ಕುಮಿತೆ)
• ಆಯುಷ್ ಏಟಂ – ಚಿನ್ನ (ಕುಮಿತೆ)
• ವಾರಾ ಭಂಡಾರಿ – ಚಿನ್ನ (ಕಾತಾ), ಕಂಚು (ಕುಮಿತೆ)
• ಆದಿತ್ಯ ಖಾಟಿಂಗ್ – ಚಿನ್ನ (ಕಾತಾ)
• ಸಾಯಿ ಕೆನೆ – ಚಿನ್ನ (ಕಾತಾ)
• ಮಹಕ್ ಮಲ್ಬಾರಿ – ಚಿನ್ನ (ಕಾತಾ), ಕಂಚು (ಕುಮಿತೆ)
• ವಾರಾ ಅನಿಲ್ ಭಂಡಾರಿ – ಚಿನ್ನ (ಕಾತಾ), ಕಂಚು (ಕುಮಿತೆ)
• ಸಮೃದ್ಧಿ ಶೆಲಾರ್ – ಬೆಳ್ಳಿ (ಕುಮಿತೆ), ಕಂಚು (ಕಾತಾ)
ಬೆಳ್ಳಿ ಪದಕ ವಿಜೇತರು (ಕುಮಿತೆ) ನೀಲ ಪಾಂಡ್ಯ, ಆರ್ಯನ್ ಮಾಳಿ, ಮಿತಾಂಶ್ ಡೊಂಗ್ರೆ, ಸ್ವರಾ ಮಸ್ಕೆ, ರೋಷನ್ ಪಿಳ್ಳೈ, ರೋಹಿತ್ ಪಿಳ್ಳೈ ಕಂಚಿನ ಪದಕ ವಿಜೇತರು (ಕುಮಿತೆ)
ಸೃಷ್ಟಿ ದಳವಿ, ಸೋಹಮ್ ಗಾಯಕವಾಡ, ಲಾವಣ್ಯ ಪಾಟೀಲ್, ಮೈರಾ ಮಿಶ್ರಾ, ಅನಯಾ ಕಾರ್ಕರ್, ಸೌಮ್ಯ ಹ್ಯಾಲಿಜ್, ವೈಷ್ಣವಿ ಶೆಲಾರ್, ದಿಶಾ ಶೆಲಾರ್, ಖುಷ್ ಪುಜಾರಾ, ದರ್ಶನ್ ಬಿರಾಜ್ದಾರ್, ಜ್ಞಾನೇಶ್ವರ ಸೊನಾವಣೆ, ರುಶ್ವಿ ಸೊನಾವಣೆ, ನಿತ್ಯಾ ಜೈಸ್ವಾಲ್, ಕಸ್ತೂರಿ ನಿಕಮ್ .
ಈ ಎಲ್ಲ ಯಶಸ್ವಿ ವಿದ್ಯಾರ್ಥಿಗಳಿಗೆ ಕೋಚ್ ಹಾಗೂ ಅಧ್ಯಕ್ಷರಾದ ಶಿಹಾನ್ ಭಂಡಾರಿ, ಸೆನ್ಪೈ ಸವಿತಾ ಭಂಡಾರಿ, ಸೆನ್ಪೈ ಶ್ರೇಯಾ ವಾಘ್ ಮತ್ತು ಸೆನ್ಪೈ ಕಮಲ್ ವಿಶ್ವಕರ್ಮಾ ಇವರ ಮಾರ್ಗದರ್ಶನ ದೊರಕಿತು .


