ನಮ್ಮ ಕಸ ನಮ್ಮ ಹೊಣೆ: ಡಾ. ಎಸ್ ಆರ್ ಹರೀಶ್ ಆಚಾರ್ಯ

0
86

ಸ್ವಚ್ಛತೆಯ ಜಾಗೃತಿ ಪ್ರತಿಯೊಬ್ಬನ ಮೂಲಭೂತ ಕರ್ತವ್ಯವಾಗಬೇಕು. ನಮ್ಮ ಮನೆಯ ಕಸದ ನಿರ್ವಹಣೆಯ ಜವಾಬ್ದಾರಿಯನ್ನು ನಾವು ಕಸ ಹುಟ್ಟುವ ಮೂಲದಲ್ಲಿಯೇ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಆಗ ನಮ್ಮ ಪರಿಸರ ಸ್ವಚ್ಛ ಪರಿಸರವಾಗುತ್ತದೆ ಎಂದು ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ಹೇಳಿದರು. ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ನಡೆದ 13ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮವನ್ನು ಕಾರ್ಕಳ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶುಭವನ್ನು ಹಾರೈಸಿ ಉದ್ಘಾಟಿಸಿ ಆಶೀರ್ವದಿಸಿದರು. 

ಜೈನ್ ಮಿಲನ್ ( ರಿ) ಕಾರ್ಕಳದ ಅಧ್ಯಕ್ಷರಾದ ಅಶೋಕ್ ಎಚ್ ಎಮ್, 

ಜೆಸಿಐ ಕಾರ್ಕಳದ ಅಧ್ಯಕ್ಷರಾದ ಶ್ವೇತಾ ಎಸ್ ಜೈನ್ ಮತ್ತು ರೋಟರಿ ಕ್ಲಬ್ ಕಾರ್ಕಳದ ಪಬ್ಲಿಕ್ ಇಮೇಜ್ ಇದರ ಅಧ್ಯಕ್ಷರಾದ ರೋಟೋರಿಯನ್ ಪಿ ಹೆಚ್ ಎಫ್ ರೇಖಾ ಉಪಾಧ್ಯಾಯ ಇವರುಗಳು ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಶ್ರಮದಾನಕ್ಕೆ ಚಲನೆಯನ್ನು ನೀಡಿದರು. 

ಕಾರ್ಕಳ ಜೈನ ಮಠ, ಚತುರ್ಮುಖ ಬಸದಿ ಪರಿಸರ ಹಾಗೂ ಗೊಮ್ಮಟ ಬೆಟ್ಟದ ಆಸುಪಾಸಿನ ಪರಿಸರದಲ್ಲಿ ಸ್ವಯಂಸೇವಕರು ಸ್ವಚ್ಛತೆಯ ಶ್ರಮದಾನ ಮಾಡಿದರು. 

ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪಡುಪಣಂಬೂರು, ನಿರ್ದೇಶಕರಾದ ಡಿ. ಭಾಸ್ಕರ ಆಚಾರ್ಯ, ಬೆಳುವಾಯಿ ಸೀತಾರಾಮ ಆಚಾರ್ಯ, ಭರತ್ ನಿಡ್ಪಳ್ಳಿ, ಜಿನವಾಣಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಿನಯ ವೈ ಆರಿಗ ಮತ್ತು ಸದಸ್ಯರು 

ಶಿವ ಭಕ್ತ ಭಜನಾ ಮಂಡಳಿ ದಾನಶಾಲೆ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಸ್ವಚ್ಛ ಬ್ರಿಗೇಡ್ ಕಾರ್ಕಳದ ಸಂಯೋಜಕರಾದ ಫೇಲಿಕ್ಸ್ ಜೋಸೆಫ್ ವಾಸ್ ಪದಾಧಿಕಾರಿಗಳಾದ ರಾಜೇಂದ್ರ ಅಮೀನ್, ಜಯರಾಮ, ನಿಖಿಲ್ ಕುಮಾರ್ ಹಾಗೂ ಸದಸ್ಯರು, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಗುಣವರ್ಮ ಜೈನ್, ಹರೀಶ್ ಆಚಾರ್ಯ ಹಾಗೂ ಸತೀಶ್ ಆಚಾರ್ಯ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಜೆಸಿಐ ನ ಸದಸ್ಯರು, ಸಿಎ ಪ್ರಭಾತ್,ಕಾರ್ಕಳ ಟೈಗರ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರು, ಕಾರ್ಕಳ ತಾಲೂಕು ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರಾದ ಎಂ ರಮೇಶ್ ಆಚಾರ್, ಅಧ್ಯಕ್ಷರು ಮತ್ತು ಸದಸ್ಯರು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್, ಕಾರ್ಕಳ ಕನೆಕ್ಟ್ ನ ವಿಜೇತ್, ಶ್ರೀ ಭುವನೇಂದ್ರ ಕಾಲೇಜಿನ ರೇಂಜರ್ಸ್ ಅಂಡ್ ರೋವರ್ಸ್ ನ ಶ್ರೀ ಪ್ರದರ್ಶ ಕೆ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಶಾಖಾಧಿಕಾರಿ ನಿತಿನ್ ಕೆ. ಹಾಗೂ ಸಿಬ್ಬಂದಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಭಾಗವಹಿಸಿ ಶ್ರಮದಾನದಲ್ಲಿ ಕೈ ಜೋಡಿಸಿ ಸಹಕರಿಸಿದರು.

LEAVE A REPLY

Please enter your comment!
Please enter your name here