ಡಿ.28 ರಂದು ಬಂಡಸಾಲೆ ಕುಂಟಾಡಿಯಲ್ಲಿ ಅಯ್ಯಪ್ಪ ಸ್ವಾಮಿ ಮಹಾಪೂಜೆ ಮತ್ತು ದೀಪಾರಾಧನೆ

0
72

ಸಾರ್ವಜನಿಕ ಶ್ರೀ ಅಯ್ಯಪ್ಪ ಭಕ್ತ ವೃಂದ (ರಿ) ಬಂಡಸಾಲೆ ಕುಂಟಾಡಿ ಇಲ್ಲಿ ದಿನಾಂಕ 27-12-2025 ನೇ ಶನಿವಾರ ಬೆಳಿಗ್ಗೆ 7-30 ಗಂಟೆಗೆ ಕುಂಟಾಡಿ ಶ್ರೀ ರಕೇಶ್ವರೀ ದೈವಸ್ಥಾನದಲ್ಲಿ ಸೀಯಾಳಾಭಿಷೇಕ ಮತ್ತು ಪುಷ್ಪಾಲಂಕಾರ ಪೂಜೆ ,ದಿನಾಂಕ 28-12-2025 ನೇ ರವಿವಾರ ಬೆಳಿಗ್ಗೆ 5.30 ಗಂಟೆಗೆ ಗಣಹೋಮ , 8-30 ಗಂಟೆಗೆ ಶ್ರೀ ಸ್ವಾಮಿ ಬೊಬ್ಬರ್ಯ ದೈವದ ಪೂಜೆ , 9.00ಗಂಟೆಗೆ ಶ್ರೀ ರಕೇಶ್ವರಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ ,12.30 ಕ್ಕೆ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ , ರಾತ್ರಿ ಗಂಟೆ 8.00 ರಿಂದ ಗುರುಸ್ವಾಮಿ ಶ್ರೀ ಸುದರ್ಶನ ಶಾಂತಿ ಮಣಿಕಂಠ ಶಿಬಿರ ಮೂಡಬಿದಿರೆ ಇವರ ನೇತೃತ್ವದಲ್ಲಿ ಅಪ್ಪ ಸೇವೆ, ಪಡಿಪೂಜೆ, ಮಹಾಪೂಜೆ ನಡೆಯಲಿರುವುದು.

ರಾತ್ರಿ ಗಂಟೆ 9.00 ರಿಂದ ಸಸಿಹಿತ್ತು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳ ಇವರಿಂದ ಸೋಣ ಸಂಕ್ರಾತಿ ಎಂಬ ಪೌರಾಣಿಕ ತುಳು ಯಕ್ಷಗಾನ ಪ್ರಸಂಗವನ್ನು ಆಡಿತೋರಿಸಲಿರುವರು.

ದಿನಾಂಕ 29-12-2025 ನೇ ಸೋಮವಾರ ಪ್ರಾತಃಕಾಲ ಗಂಟೆ 4.00 ಗಂಟೆಗೆ ಗೆಂಡಸೇವೆ ಮತ್ತು ಗಂಟೆ 5.30 ಗಂಟೆಗೆ ಮಹಾಪೂಜೆ ನಡೆಯಲಿರುವುದು, ದಿನಾಂಕ 30-12-2025 ನೇ ಮಂಗಳವಾರ ಬೆಳಿಗ್ಗೆ 7.00 ಗಂಟೆಗೆ ಸರಿಯಾಗಿ ಎಲ್ಲಾ ಸ್ವಾಮಿಗಳ ಇರುಮುಡಿ ಕಟ್ಟುವುದು, ಮಧ್ಯಾಹ್ನ ಗಂಟೆ 12.00 ಗಂಟೆಗೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು , ಸ್ವಾಮಿ ಗಣೇಶ ಮೂಜೂರು ಇವರ 18 ನೇ ವರ್ಷದ ಶಬರಿಮಲೆ ಯಾತ್ರೆ ಸಂಜೆ 5.00 ಗಂಟೆ ಎಲ್ಲಾ ಸ್ವಾಮಿಗಳ ಶಬರಿ ಮಲೆ ಯಾತ್ರೆ ನಡೆಯಲಿರುವುದು.

LEAVE A REPLY

Please enter your comment!
Please enter your name here