ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಕೀರ್ತನ್ ಕೆ. ಪಿ. ಭಾರತೀಯ ವಾಯುಪಡೆಗೆ ಆಯ್ಕೆ

0
54

ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಕೀರ್ತನ್ ಕೆ. ಪಿ. ಇವರು ಭಾರತೀಯ ವಾಯುಪಡೆಯ ಏರ್‌ಮ್ಯಾನ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಪುತ್ತೂರು ತಾಲೂಕಿನ ಹಿರೇಬಂಡಾಡಿ ನಿವಾಸಿಗಳಾದ ಪದ್ಮಯ್ಯ ಗೌಡ ಹಾಗೂ ಪುಷ್ಪಲತಾ ದಂಪತಿಗಳ ಸುಪುತ್ರನಾದ ಇವರು, ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಪೂರೈಸಿರುತ್ತಾರೆ. ಡಿಸೆಂಬರ್ 29 ರಿಂದ ಬೆಳಗಾವಿಯಲ್ಲಿ ಆರು ತಿಂಗಳುಗಳ ಅವಧಿಯ ತರಬೇತಿಯನ್ನು ಪಡೆಯಲಿದ್ದು, ಇವರ ಈ ಸಾಧನೆಯನ್ನು ಗುರುತಿಸಿ ಕಾಲೇಜಿನ ವತಿಯಿಂದ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ., ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲಕ್ಷ್ಮೀ ಪ್ರಸಾದ್, ಸಹ ಕಾರ್ಯನಿರ್ವಹಣಾ ಅಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ,
ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ಹಾಗೂ ಉಪನ್ಯಾಸಕ–ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದು , ಶುಭ ಹಾರೈಸಿದರು.

LEAVE A REPLY

Please enter your comment!
Please enter your name here