ವರದಿ ರಾಯಿ ರಾಜ ಕುಮಾರ
ಗ್ರಾಮೀಣ ಪ್ರದೇಶದ ಧರ್ಮ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿಯ ಉನ್ನತೀಕರಣದ ಉದ್ದೇಶವನ್ನು ಇಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕ ಕೊಯ್ಯೂರು ತರಕಾರಿ ಪ್ರೌಢಶಾಲಾ ವಠಾರದಲ್ಲಿ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಭುಜಬಲಿ ವಹಿಸಿದ್ದರು. ಉದ್ಘಟನೆಯನ್ನು ಚಿನ್ನಪ್ಪಗೌಡ ನಡೆಸಿದರು. ಶಾಲೆಯ ಲೈಬ್ರರಿಯನ್ನು ಕೂಡ ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಮೋಹನ್ ಕುಮಾರ್ ಮೆರವಣಿಗೆಗೆ ಚಾಲನೆಯನ್ನು ನೀಡಿದರು. ಪರಿಷತ್ತಿನ ತಾಲೂಕು ಅಧ್ಯಕ್ಷ ಯದುಪತಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಶ್ರೀನಾಥ್ ಆಶಯ ಭಾಷಣವನ್ನು ಮಾಡಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಪ್ರಚಂಡ ಭಾನು ಭಟ್ ಪಾಂಬೆಲು, ಕಾರ್ಯಧ್ಯಕ್ಷ ಮೋಹನ ಗೌಡ, ರಾಧಾಕೃಷ್ಣ ತಚ್ಚಮೆ, ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಗೌಡ ಪಾಮ್ಬೇಲು, ಸಂಚಾಲಕ ದಾಮೋದರ್ ಗೌಡ, ಕೇಶವ ಗೌಡ ಕೊಂಗಜೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಮಣಿ, ಕೃಷ್ಣಪ್ಪ ಪೂಜಾರಿ, ಧರಣಪ್ಪ ಗೌಡ ಉಪಸ್ಥಿತರಿದ್ದರು.
ಡಾ. ದಿವಾಕರ್, ಅಶೋಕ್ ಕುಮಾರ್, ಲಕ್ಷ್ಮಿ ನಾರಾಯಣರಾವ್, ರಾಧಾಕೃಷ್ಣ ರಾವ್ ಇತ್ಯಾದಿಯರು ಕಾರ್ಯಕ್ರಮ ಸಂಘಟಿಸಿದ್ದರು.

