ದಾವಣಗೆರೆ: ಹುಬ್ಬಳ್ಳಿಯ “ವಿಶ್ವದರ್ಶನ”, “ಕರ್ನಾಟಕ ಪ್ರಜಾದರ್ಶನ” ದಿನಪತ್ರಿಕೆಯವತಿಯಿಂದ ದಾವಣಗೆರೆಯ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ನಿನ್ನೆ ತಾನೇ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಾಲ್ಕು ದಶಕಗಳಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ನಿರಂತರವಾಗಿ ಕಠಿಣ ಪರಿಶ್ರಮದಿಂದ ವಾಣಿಜ್ಯನಗರಿಯನ್ನು ಸಾಂಸ್ಕೃತಿಕ ನಗರಿಯಾಗಿ ಪರಿವರ್ತಿಸಿದ ಸಾಧನೆಗಳನ್ನು ಗುರುತಿಸಿ “ಕರ್ನಾಟಕ ಕಲಾ ಕಾಯಕ ರತ್ನ” ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಪ್ರಧಾನ ಮಾಡಲಾಯಿತು.
“ವಿಶ್ವದರ್ಶನ”, “ಕರ್ನಾಟಕ ಪ್ರಜಾದರ್ಶನ” ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಎಸ್.ಎಸ್.ಪಾಟೀಲ್ ಸೇರಿದಂತೆ ವಿವಿಧ ಜಿಲ್ಲೆಗಳ ಶ್ರೀ ಮಠಾಧೀಶರಾದ ಜಗದ್ಗುರುಗಳ ಉಪಸ್ಥಿತಿಯಲ್ಲಿ ಕುವೆಂಪು ಕನ್ನಡ ಭವನದ ಪ್ರೊ|| ಎಸ್.ಬಿ.ರಂಗನಾಥ್ ವೇದಿಕೆಯಲ್ಲಿ ಈ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಕರ್ನಾಟಕ ಸಗಮ ಸಂಗೀತ ಪರಿಷತ್, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಸಿನಿಮಾಸಿರಿ ಸಂಸ್ಥೆ, ಕರ್ನಾಟಕ ಸಗಮ ಸಂಗೀತ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಕರಾವಳಿ ಮಿತ್ರ ಮಂಡಳಿ, ಬಿಚ್ಕತ್ತಿ ಕುಟುಂಬ ಮುಂತಾದ ಅನೇಕ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದರು.
Home Uncategorized ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಕರ್ನಾಟಕ ಕಲಾ ಕಾಯಕ ರತ್ನ” ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಪ್ರಧಾನ

