ಜನವರಿ 3 ರಂದು ಪುನರೂರು ಪ್ರತಿಷ್ಠಾನ ಪುನರೂರು ಸಂಭ್ರಮ

0
9

ಮೂಲ್ಕಿ : ಪುನರೂರು ಪ್ರತಿಷ್ಠಾನ (ರಿ.) ಅರ್ಪಿಸುವ ಪುನರೂರು ಸಂಭ್ರಮ; ವರುಷದ ಹರುಷ ಕಾರ್ಯಕ್ರಮವು ಜನವರಿ 3 ರ ಶನಿವಾರ ಸಂಜೆ 4 ಗಂಟೆಗೆ ಪುನರೂರಿನ ಭಾರತಮಾತಾ ಮೈದಾನದ ಪುನರೂರು ಮಂಟಪದಲ್ಲಿ ಜರಗಲಿದೆ.

ಕಾರ್ಯಕ್ರಮವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಸತ್ಯನಾರಾಯಣ ನೂರಿತ್ತಾಯರು ಉದ್ಘಾಟಿಸಲಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಅವರ ಶುಭ ಹಾರೈಸಲಿದ್ದಾರೆ.ಪುನರೂರು ಪ್ರತಿಷ್ಠಾನ (ರಿ.) ನ ಗೌರವಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು ಗಾನ ನೃತ್ಯ ಅಕಾಡೆಮಿ ಮಂಗಳೂರಿನ ಕಾರ್ಯದರ್ಶಿ ರಾಧಕೃಷ್ಣ ಭಟ್‌,ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್‌ ವಾಸುದೇವ ರಾವ್‌ ಪುನರೂರು ,ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್‌ ಕೆ ಉಷಾರಾಣಿ,ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು,ಉಪಾಧ್ಯಕ್ಷರಾದ ರಾಧಿಕಾ ಸುಧೀರ್,ಮಲ್ಲಿಕಾ ಅರವಿಂದ್‌,ಕೋಶಾಧಿಕಾರಿ ಚಂದ್ರಿಕಾ ಸುಧೀರ್‌,ಜನ ವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷೆ ಅಕ್ಷತಾ ಶೆಟ್ಟಿ ಉಪಸ್ತಿತರಿರುವರು.ಸಭಾ ಕಾರ್ಯಕ್ರಮದ ಬಳಿಕ ಸಂಜೆ 6 ಗಂಟೆಗೆ ಗುರು ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದಲ್ಲಿ ಗಾನ ನೃತ್ಯ ಅಕಾಡೆಮಿ, ಮಂಗಳೂರು ನವರಿಂದ ‘ನೃತ್ಯ ಸಂಗಮ ಹಾಗೂ ನೃತ್ಯ ರೂಪಕ ಸತ್ಯಮೇವ ಜಯತೇ ಪ್ರದರ್ಶನ ಜರಗಲಿದೆಯೆಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್‌ ಪುನರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here