ಮೊಗ್ರು :(ಡಿ. 28) ಮೊಗ್ರು ಗ್ರಾಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಗೇರಡ್ಕ ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ಮತ್ತು ಮೊಗ್ರು ಶಾಲೆಯ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಶಾಲಾ ವಠಾರದಲ್ಲಿ ಡಿ 28 ರಂದು ನೆರವೇರಿತು.
ಆಟೋಟ ಸ್ಪರ್ಧೆಯಲ್ಲಿ ಊರಿನ ಮಕ್ಕಳು,ಯುವಕರು, ಮಹಿಳೆಯರು, ಹಿರಿಯರು ಭಾಗವಹಿಸಿದರು,
ಮಧ್ಯಾಹ್ನ ನಡೆದ ಸಭಾಕಾರ್ಯಕ್ರದಲ್ಲಿ ಮುಗೇರಡ್ಕ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಅರ್ಬಿ ಜಗದೀಶ್ ಗೌಡ ಸಭಾಧ್ಯಕ್ಷತೆ ವಹಿಸಿದ್ದರು, ಶ್ರೀ ಕ್ಷೇತ್ರ ಮುಗೇರಡ್ಕ ಮೂವರು ದೈವಸ್ಥಾನ ಆಡಳಿತ ಮೊಕ್ತೇಸರಾದ ರಾಮಣ್ಣ ಗೌಡ ಇವರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು, ಮುಖ್ಯ ಅತಿಥಿಗಳಾಗಿ, ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಇವರು ಮಾತಾಡಿ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು, ಸ ಕಿ ಪ್ರಾ. ಶಾಲೆ ಮುಗೇರಡ್ಕ ಇದರ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಪ್ರಜ್ಞಾ ಚಿದಾನಂದ ದಡ್ಡು, ಹಾಗೂ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ (ರಿ )ಇದರ ಅಧ್ಯಕ್ಷರಾದ ಕುಶಾಲಪ್ಪ ನೆಕ್ಕರಾಜೆ, ಕಾರ್ಯಧರ್ಶಿ ಮನೋಹರ ಗೌಡ ಅಂತರ, ಶಾಲಾ ಮುಖ್ಯೋಪಾಧ್ಯಾಯರಾದ ಮಾಧವ ಗೌಡ, ಸ್ಥಳೀಯ ದುರ್ಗಾನುಗ್ರಹ ಭಜನಾ ಮಂದಿರದ ಅಧ್ಯಕ್ಷರಾದ ಲೋಕೇಶ್ ದಂಬೆತ್ತಿಮಾರು ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಧರ್ಶಿ ರಮೇಶ್ ನೆಕ್ಕರಾಜೆ ಭಾಗವಹಿಸಿದರು. ಮಾಧವ ಗೌಡ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಜಗದೀಶ್ ಇವರು ಅಧ್ಯಕ್ಷೀಯ ನುಡಿಗಳೊಂದಿಗೆ ಧನ್ಯವಾದ ಅರ್ಪಿಸಿದರು., ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ದಿವ್ಯ ಮಾಡಿದರು,
ಸಭಾಕಾರ್ಯಕ್ರಮದಲ್ಲಿ ಊರಿನ ಹೆಮ್ಮಯ ನಿವೃತ್ತ ಸೈನಿಕ ಅಶೋಕ್. ಪಿ .ಲ್. ಇವರಿಗೆ ಹಾಗೂ ಬೆಳ್ತಂಗಡಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಗಳಿಸಿದ ಕುI ಕೃತಿ, ಪಿಲಿಕುಡೆಲ್ ಇವರಿಗೆ ಸನ್ಮಾನ ನೆರವೇರಿಸಲಾಯಿತು ಹಾಗೂ ಊರಿನ ಪ್ರತಿಭಾವಂತ ಕಬಡ್ಡಿ ಆಟಗಾರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ನಿಕ್ಷಿತ್ ಪೂಜಾರಿ ಮುಗೇರಡ್ಕ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸ. ಕಿ.ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿನ ಮಕ್ಕಳಿಂದ ಮತ್ತು ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿ ಬಂತು.ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರನ್ನು ಬಹುಮಾನ ನೀಡಿ ಸತ್ಕರಿಸಲಾಯಿತು. ಊರಿನ ಹಿರಿಯರು ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು .

