ಕಾಸರಗೋಡು : ಜಿಲ್ಲಾ ಮಟ್ಟದ ಕುಲಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

0
4

ಕಾಸರಗೋಡು ಜಿಲ್ಲಾ ಕುಲಾಲ ಸಂಘ ಕುಂಬಳೆ ಪಂಚಾಯತ್ ಶಾಖೆಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕುಲಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಕಳತ್ತೂರು ಶಾಲಾ ಮೈದಾನದಲ್ಲಿ ಜರಗಿತು.ಕುಲಾಲ ಪಂಚಾಯತ್ ಸಮಿತಿಯ ಅಧ್ಯಕ್ಷರಾದ ನಾರಾಯಣ ಕುಲಾಲ್ ನಾರಾಯಣಮಂಗಲ ಕ್ರೀಡಾಕೂಟವನ್ನು ಉದ್ಘಾಟಿಸಿದರು.ಬಳಿಕ ಸೀಮಿತ ಹತ್ತು ತಂಡಗಳ ಪಂದ್ಯಾಟವು ಜರಗಿತು.ಜೆ ಪಿ ಕಳತ್ತೂರು. ಸಂದೇಶ್ ಮಂಜೇಶ್ವರ,ಜೀವನ್ ಪೈವಳಿಗೆ,ಸಂದೀಪ್ ಕಳತ್ತೂರು ಇವರು ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರು. ನೂರಾರು ಕುಲಾಲ ಬಾಂಧವರು ಕ್ರೀಡಾಕೂಟ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಂಡರು.ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಕಮಾರ್ತೆ,ಕಾರ್ಯದರ್ಶಿ ಯಾದ ಸತೀಶ್ ಶ್ರಾವಣೆಕೆರೆ ಕ್ರೀಡಾ ಕಾರ್ಯದರ್ಶಿ ಶೇಷಪ್ಪ ಕಳತ್ತೂರು ಇವರ ಮುತುವರ್ಜಿಯಲ್ಲಿ ಕ್ರೀಡಾಳುಗಳಿಗೆ ಉಪಹಾರ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ಪಂದ್ಯಾಟದಲ್ಲಿ ಕುಲಾಲ ವೇದಿಕೆ ಮಂಜೇಶ್ವರ ಪ್ರಥಮ ಸ್ಥಾನವನ್ನು,ಕುಲಾಲ್ ಫ್ರೆಂಡ್ಸ್ ಪಂಜಿಕಲ್ಲು ದ್ವಿತೀಯ ಸ್ಥಾನವನ್ನು ಹಾಗೂ ಕುಲಾಲ್ ವಾರಿಯರ್ಸ್ ಕಳತ್ತೂರು ತೃತೀಯ ಸ್ಥಾನವನ್ನು ಗಳಿಸಿದರು.ಆ ಬಳಿಕ ಜರಗಿದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ನಾರಾಯಣಕುಲಾಲ್ ನಾರಾಯಣಮಂಗಲ ಸಭೆಯ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಸಮಾಜ ಸೇವಕರಾದ ಹರೀಶ್ ಬೊಟ್ಟಾರಿ ಹಾಗೂ ಜಿಲ್ಲಾ ಸಂಘದ ಕಟ್ಟಡ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ದೀಕ್ಷಾ ಕುಂಜತ್ತೂರು ಭಾಗವಹಿಸಿದರು.ಕೃಷ್ಣ ಕಳತ್ತೂರು ನಿರೂಪಿಸಿದರು.ಶೇಷಪ್ಪ ಕುಲಾಲ್ ಕಳತ್ತೂರು ಸ್ವಾಗತಿಸಿ ಅಶೋಕ ಪುಣಿಯೂರು ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here