ಉಡುಪಿ : ಕುವೆಂಪು ರಾಮಾಯಣ ದರ್ಶನಂ ಕೃತಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು, ಕನ್ನಡ ಭಾಷೆ, ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿದ್ದರು ಎಂದು ಸಮಾನಮನಸ್ಕ ಕನ್ನಡಿಗರ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಹೇಳಿದರು.
ಮೂಳೂರು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲ್ಲಿ ಸಮಾನಮನಸ್ಕ ಕನ್ನಡಿಗರ ವೇದಿಕೆಯಿಂದ ಆಯೋಜಿಸಿದ್ದ ಕುವೆಂಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಮಗು ಹುಟ್ಟುತ್ತಲೇ ವಿಶ್ವ ಮಾನವ ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವ ಮಾನವನಾಗಿ ಮಾಡುವುದೇ ವಿದ್ಯೆಯ ಕರ್ತವ್ಯ ಆಗಬೇಕು. ಇಂದು ಅನೇಕ ವಿಚ್ಛಿದ್ರಕಾರಕ ಶಕ್ತಿಗಳಿಂದ ಮಾನವೀಯತೆ ಮರೆಯಾಗುತ್ತಿರುವ ಸಂದರ್ಭದಲ್ಲಿ ಕುವೆಂಪು ವಿಶ್ವ ಮಾನವ ಕಲ್ಪನೆ ಪ್ರಸ್ತುತವಾಗಿದೆ ಎಂದರು.
ಮುಖ್ಯ ಶಿಕ್ಷಕಿ ಸುನೀತಾ ಮಾತನಾಡಿ, ಕುವೆಂಪು ಅಕ್ಷರಗಳಲ್ಲಿ ಭಾವನೆಗಳನ್ನು ಮಾತ್ರ ತುಂಬದೇ ನಾಡಿನ ಸಾಕ್ಷಿ ಪ್ರಜ್ಞೆಯನ್ನು ಬೆಳೆಸಿದ್ದಾರೆ. ವಿಶ್ವ ಮಾನವತೆಗೆ ದಾರಿ ತೋರಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರಾದ ಸುರೇಶ್ ಡಿ., ಅನುರಾಧ ಜಿ.ಎಸ್, ಲಕ್ಷ್ಮೀ ,ವಿಜಯ ಲಕ್ಷ್ಮೀ , ರಾಘವೇಂದ್ರ, ಶ್ರೀದೇವಿ, ಚಂದ್ರಶೇಖರ್, ಶಿಕ್ಷಕಿಯರಾದ ಚೈತ್ರ ಹೆಬ್ಬಾರ್, ಜಯಶ್ರೀ, ವಿಜಯಶ್ರೀ, ಸವಿತ ಎಸ್., ಉಷಾ, ಪ್ರೇಮಾ, ಮಾಲತಿ, ಭವ್ಯ, ಚಂದ್ರಿಕಾ, ಶೀಲಾ ಟಿ.ಎಸ್., ಸಂಗೀತಾ, ಸ್ವಾತಿ ಉಪಸ್ಥಿತರಿದ್ದರು.

