ಕಿನ್ನಿಗೋಳಿ : ಬಸ್ ಚಾಲಕ ನಿರ್ವಾಹಕರು ಶ್ರಮಜೀವಿಗಳು ಜೊತೆಗೆ ಊರಿನ ರಾಯಭಾರಿಗಳು- ಸಂತೋಷ್ ಕುಮಾರ್ ಹೆಗ್ಡೆ

0
54

ಮುಲ್ಕಿ : ಕಿನ್ನಿಗೋಳಿ ಬಸ್ ಚಾಲಕರ ನಿರ್ವಾಹಕರ ಸಂಘದ 13 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಗೌರವ ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಮಾತನಾಡಿ ಬಸ್ ಚಾಲಕ ನಿರ್ವಾಹಕರು ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಶ್ರಮಜೀವಿಗಳಾಗಿದ್ದು ಊರಿನ ರಾಯಭಾರಿಗಳು, ಸಂಘದ ಸದಸ್ಯರು ಸಂಚಾರದಲ್ಲಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಉದ್ಯಮಿ ದೀಪಕ್ ರೋಡ್ರಿಗಸ್, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ , ಕಿನ್ನಿಗೋಳಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ , ವೇದವ್ಯಾಸ ಉಡುಪ,ಕೊಡೆತ್ತೂರು ದೇವಸ್ಯ ಮಠ, ಮಾಜೀ ತಾ ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಬಸ್ ಚಾಲಕರ ಮಾಲಕರ ಅಥ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಎಪಿಎಂಸಿ ಮಾಜಿ ಸದಸ್ಯ ಪ್ರಮೋದ್ ಕುಮಾರ್,ಮೆನ್ನಬೆಟ್ಟು ಗ್ರಾ ಪಂ ಮಾಜಿ ಸದಸ್ಯ ಮಹಮದ್ ರಫೀಕ್, ಕಿನ್ನಿಗೋಳಿ ಜೆ.ಬಿ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಪುನರೂರು ,ಬಸ್ ಚಾಲಕರ ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ ಉಲ್ಲಂಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹರೀಶ್ ಸ್ವಾಗತಿಸಿದರು, ರಘುನಾಥ ಕಾಮತ್ ಕಾರ್ಯಕ್ರಮ ನಿರೂಪಿಸಿ, ಶರತ್ ಶೆಟ್ಟಿ ವಂದಿಸಿದರು. ಸಾಧಕರ ನೆಲೆಯಲ್ಲಿ ಪೌರಕಾರ್ಮಿಕರಿಗೆ,ಆಶಾ ಕಾರ್ಯಕರ್ತೆಯರಿಗೆ ಹಾಗೂ ಬಸ್ ಚಾಲಕರಿಗೆ ಗೌರವಾರ್ಪಣೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here