ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವಜವಾಹಕಿ: ದೇಶ ಕಂಡ ಮಹಾನ್ ದೇಶ ಪ್ರೇಮಿ ವಕೀಲೆ ಶ್ರೇಯ ಸಿಂಘಾಲ್

0
106

ಶ್ರೇಯ ಸಿಂಘಾಲ್ ಅತಿ ಸಣ್ಣ ವಯಸ್ಸಿನಲ್ಲಿಯೇ ಕಾನೂನು ಶಾಸ್ತ್ರ ಮತ್ತು ನ್ಯಾಯ ಶಾಸ್ತ್ರದ ಬಗ್ಗೆ ಆಳವಾದ ಆಸಕ್ತಿ ಬೆಳೆಸಿಕೊಂಡು, ಕೇವಲ 26ನೇ ವಯಸ್ಸಿನಲ್ಲಿ ದೇಶದ ಗಮನ ಸೆಳೆದ ವಕೀಲೆ ಶ್ರೇಯ ಸಿಂಘಾಲ್ ಅವರು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮಹತ್ವದ ಹೆಸರಾಗಿದ್ದಾರೆ.

ಸೋಶಿಯಲ್ ಮೀಡಿಯಾ ಬಳಕೆದಾರರ ಮೇಲೆ ನಿಯಂತ್ರಣ ಹೇರುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದ IT Act 2000ರ ಸೆಕ್ಷನ್ 66A ವಿರುದ್ಧ ಧೈರ್ಯವಾಗಿ ನ್ಯಾಯಾಲಯದ ಬಾಗಿಲು ತಟ್ಟಿದವರು . ಈ ವಿಧಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಂದೆ ಸಮರ್ಥವಾಗಿ ವಾದಿಸಿ, 2015ರಲ್ಲಿ 66A ಸಂಪೂರ್ಣ ರದ್ದಾಗುವಂತೆ ಮಾಡಿದ ಐತಿಹಾಸಿಕ ಹೋರಾಟಕ್ಕೆ ಶ್ರೇಯ ಸಿಂಘಾಲ್ ಕಾರಣರಾದರು.

ಇಂದು ಪತ್ರಕರ್ತರು, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರು ಮತ್ತು ವೀಡಿಯೋ ಮಾಡುವ ಯುವಕರು ನಿರ್ಭಯವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಅದರ ಹಿಂದೆ ಶ್ರೇಯ ಸಿಂಘಾಲ್ ಅವರ ನ್ಯಾಯಯುತ ಹೋರಾಟ ಇದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಈ ಮಹಿಳೆ, ನಮ್ಮ ಕಾಲದ ಮಹಾನ್ ಪ್ರಜಾಪ್ರಭುತ್ವವಾದಿಯಾಗಿ ಯಾವತ್ತೂ ನೆನಪಾಗಬೇಕಾದವರು.

LEAVE A REPLY

Please enter your comment!
Please enter your name here