ಗಂಗೊಳ್ಳಿ ಎನ್ಎನ್ಓ ಕಪ್ 2025 ಸಹಾರ ಕ್ರಿಕೆಟರ್ಸ್ ಗಂಗೊಳ್ಳಿ ಗೆ ವಿಜಯ

0
111

ಕಲಾಯ್ಸ್ ಅಲ್ಫೇನ್ ಗಂಗೊಳ್ಳಿ, ನೂರ್ ಕ್ರಿಕೆಟರ್ಸ್ ಗಂಗೊಳ್ಳಿ, ಹಾಗೂ ನಮ್ಮ ನಾಡ ಒಕ್ಕೂಟ (ರಿ). ಇವರುಗಳ ಆಶ್ರಯದಲ್ಲಿ ಎನ್ಎನ್ ಓ ಕಪ್ 2025 ಕಲಾಯ್ಸ್ ಅಲ್ಫೇನ್ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಇತ್ತೀಚಿಗೆ ಮುಬಾರಕ್ ಮೈದಾನ ಗಂಗೊಳ್ಳಿಯಲ್ಲಿ ನಡೆಯಿತು.

ಪ್ರಥಮ ವಿಜೇತ ಪ್ರಶಸ್ತಿಯನ್ನು ಸಹಾರ ಕ್ರಿಕೆಟರ್ಸ್ ಗಂಗೊಳ್ಳಿ ಪ್ರಶಸ್ತಿ ಮತ್ತು 1,00,111/- ನಗದನ್ನು ತನ್ನದಾಗಿಸಿಕೊಂಡಿದೆ. ಮುಬಾರಕ್ ಗಂಗೊಳ್ಳಿ ತಂಡ ದ್ವಿತೀಯ ಪ್ರಶಸ್ತಿ ಹಾಗೂ 50,555/- ನಗದನ್ನು ಪಡೆದುಕೊಂಡಿತು. ಪ್ರಪ್ರಥಮವಾಗಿ ಬೈಂದೂರು ಕ್ಷೇತ್ರದ ಇತಿಹಾಸದಲ್ಲಿ ಸರಣಿ ಶ್ರೇಷ್ಠ ಆಟಗಾರನಿಗೆ ಕೊಡಮಾಡಲಾದ ದ್ವಿಚಕ್ರ ವಾಹನ ಮುಬಾರಕ್ ತಂಡದ ಮೊಹಮ್ಮದ್ ಅಜೀಂ ಪಡೆದುಕೊಂಡರು. ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಸ್ತಿಯನ್ನು ಸಹಾರ ಗಂಗೂಳ್ಳಿ ತಂಡದ ನವೀನ್ ಕುಂದಾಪುರ ಪಡೆದುಕೊಂಡರು. ಉತ್ತಮ ಬ್ಯಾಟ್ಸ್ಮನ್ ಆಗಿ ಸೈಕಲ್ ನ್ನು ಸಹಾರ ಗಂಗೊಳ್ಳಿ ತಂಡದ ನವೀನ್ ಕುಂದಾಪುರ ಮೂಡಿಬಂದರು.ಉತ್ತಮ ಬೌಲರ್ ಆಗಿ ಸೈಕಲ್ ನ್ನು ಡ್ರೈವರ್ ಫ್ರೆಂಡ್ ತಂಡದ ಪ್ರಮೋದ್ ಆಯ್ಕೆ ಯಾದರು. ಉತ್ತಮ ಕ್ಷೇತ್ರ ರಕ್ಷಕರಾಗಿ ಬಿಲಾಲ್ ಗೋಳಿಹೊಳೆ ತಂಡದ ಇಮ್ರಾನ್ ಆಯ್ಕೆಯಾದರು. ಸಮರೂಪ ಸಮಾರಂಭದಲ್ಲಿ ಅತಿಥಿಗಳಾಗಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮೊಮಿನ್ ಸಮೀರ್ ,ಮೊಹಮ್ಮದ್ ಹುಸೇನ್ , ಸ್ಥಳೀಯರಾದ ಶಾಕಿರ್ ಮಾಲ್ಗ, ಹಾಜಿ ಸಾಹೇಬ್ , ಸಮಿಉಲ್ಲಾ ಎಂ. ಹೆಚ್ ಉಪಸ್ತಿರಿದ್ದರು.ಕಲಾಯ್ಸ್ ಅಲ್ಫೇನ್ ಗಂಗೊಳ್ಳಿ ಇದರ ಮುಖ್ಯಸ್ಥ ಜಹೀರ್ ನಾಖುದಾ ಸ್ವಾಗತಿಸಿದರು. ಬಿಲಾಲ್ ಮಣಿಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here