ವರದಿ ವಿನೋದ್ ಶೆಟ್ಟಿ ಉಡುಪಿ.
ಅಟಲ್ ಬಿಹಾರಿ ವಾಜಪೇಯಿ ಇವರ ಜನ್ಮ ಶತಾಬ್ದಿ ಪ್ರಯುಕ್ತ ಮಾಡಿದ ಅದ್ದೂರಿಯ ಜನ ಮಾನಸದಲ್ಲಿ ಉಳಿಯುವ ಪರ್ಬ. ಮಾಜಿ ಶಾಸಕರು ಆದ ಲಾಲಾಜಿ ಆರ್ ಮೆಂಡನ್ ರವರನ್ನು ಮುಂದಿಟ್ಟುಕೊಂಡು, ಕಾಪು ಕ್ಷೇತ್ರ ಅಧ್ಯಕ್ಷರು ಆದ ಜಿತೇಂದ್ರ ಶೆಟ್ಟಿಯವರ ನಾಯಕತ್ವದ ಜೊತೆಯಾಗಿ,ಜಿಲ್ಲಾ ಅಧ್ಯಕ್ಷರು ಮತ್ತು ತಂಡದ ಸಹಕಾರದೊಂದಿಗೆ ಮತ್ತು ಕಾಪು ಮಂಡಲ ಪದಾಧಿಕಾರಿಗಳು ಮತ್ತು ವಿವಿಧ ಮೋರ್ಚಾ ಅಧ್ಯಕ್ಷರುಗಳನ್ನು ಮತ್ತು ಪದಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು, ಕಾರ್ಯಕರ್ತರನ್ನು ಕೂಡಿಕೊಂಡು, ರಾಜಕೀಯ ಇರೋದು ಪ್ರತಿ ಜನರ ಏಳಿಗೆಗಾಗಿ, ಎಂದು ದುಡಿಯುವ ನಾಯಕ, ಪಕ್ಷ ಇನ್ನಷ್ಟು ಸದೃಢ ಆಗಬೇಕು ಎನ್ನುವ ದೃಷ್ಟಿಯಿಂದ ಜನಪ್ರಿಯ ಶಾಸಕರು ಆದ ಗುರ್ಮೆಸುರೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಡಲ ಪರ್ಬ ಭರ್ಜರಿ ಯಶಸ್ಸು ಕಂಡಿತು, ಅರೋಗ್ಯ ಶಿಬಿರಗಳು, ವಿವಿಧ ಸ್ವರ್ಧೆಗಳು, ಖ್ಯಾತ ಗಾಯಕರು ಆದ ರಘು ದೀಕ್ಷಿತ್ ಮತ್ತು ಕುನಾಲ್ ಗಾಂಜಾವಾಲ ಇವರ ಸಂಗೀತ ರಸಮಂಜರಿ ಕಾರ್ಯಕ್ರಮ ಗಂಧರ್ವ ಲೋಕವನ್ನು ಧರೆಗೆ ಇಳಿಸಿದಂತಿತ್ತು.
ಸುಮಾರು 50 ತರಹದ ಆಹಾರ ಮೇಳದ ಸ್ಟಾಲ್ ಗಳು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.. ಹಿರಿಯ ಕಾರ್ಯಕರ್ತರಿಗೆ ಗೌರವ, ಅಟಲ್ ಪ್ರಶಸ್ತಿ, ಸಾಧಕರಿಗೆ ಸನ್ಮಾನ, ಅಬ್ಬಬ್ಬಾ ಎನ್ನುವಂತಹ ಸಂಭ್ರಮದ ಕಡಲ ಪರ್ಬ.ಎಲ್ಲರ ಮೆಚ್ಚುಗೆ ಪಾತ್ರವಾಗಿದೆ .

