ವಿಶೇಷಚೇತನರು ತಯಾರಿಸಿದ ಕೈ ಚೀಲ ಬಿಡುಗಡೆ

0
47

ಸೇವಾ ಕ್ಷೇತ್ರದಲ್ಲಿ ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಕಳೆದ 22 ವರ್ಷದಿಂದ ಶ್ರಮಿಸುತ್ತಿರುವ ಚೇತನಾ ವಿಶೇಷ ಶಾಲೆಯಲ್ಲಿ ಇದೀಗ ಮುಂದುವರಿದ ಅಂಗವಾಗಿ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಮರು ಬಳಕೆಯ ಕೈ ಚೀಲಗಳನ್ನು ಸಿದ್ಧಗೊಳಿಸುವ ತರಬೇತಿ ನೀಡಿ ಅವರು ತಯಾರಿಗೊಳಿಸಿದ ಕೈ ಚೀಲಗಳನ್ನು ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಕಾರ್ಯಕ್ರಮ ನಡೆಯಿತು.

ಕೆ. ಶಿವರಾಮ್ ಶೆಟ್ಟಿ ನಿವೃತ್ತ ಮುಖ್ಯೋಪಾಧ್ಯಾಯರು ಪರ್ಕಳ ಹೈಸ್ಕೂಲ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಚೇತನಾ ವಿಶೇಷ ಶಾಲೆಯ ಕಾರ್ಯ ಮೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೈ ಚೀಲ ತಯಾರಿಕೆ ಹಾಗೂ ಅದರ ಮೇಲಿನ ಸ್ಕ್ರೀನ್ ಪ್ರಿಂಟಿಂಗ್ ಬಗ್ಗೆ ಸರಿಯಾದ ಮಾಹಿತಿ ಹಾಗೂ ತರಬೇತಿ ನೀಡಿ ಸಂಸ್ಥೆಗೆ ಸಹಕರಿಸಿದ ಗುರು ಪ್ರಿಂರ‍್ಸ್ ಹಿರಿಯಡಕ ಇದರ ಮಾಲಕರಾದ ರಾಘವ ಸಿ ಎಚ್ ಇವರ ನಿಸ್ವಾರ್ಥ ಸೇವೆ ಬಗ್ಗೆ ಸಂಸ್ಥೆಯ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸಿ ಅಭಿನಂದಿಸಲಾಯಿತು.

ಅತಿಥಿಗಳಾದ ಹೆಚ್. ಸತೀಷ್ ಶೆಟ್ಟಿ, ನಿವೃತ್ತ ಸೀನಿಯರ್ ಮ್ಯಾನೇಜರ್, ಕೆನರಾ ಬ್ಯಾಂಕ್-2, ದಿನಕರ್ ಶೆಟ್ಟಿ ಹೆರ್ಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಜೆಪಿ ಉಡುಪಿ ಜಿಲ್ಲೆ, ಶಾಲಾ ಹಿತೈಷಿ ಸಿ.ಎ ಕಾರ್ಕಳ್ ಕಾಮಲಾಕ್ಷ ಕಾಮತ್ ಇವರು ಚೇತನಾ ಶಾಲೆ ಹಾಗೂ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷರಾದ ಎಂ ಗಣಪತಿ ಪೈ ಹಾಗೂ ಕಾರ್ಯದರ್ಶಿ ರಘುನಾಥ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ವಿಜಯ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ಕಿರಣ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಮುಖ್ಯ ಶಿಕ್ಷಕಿ ಹೇಮಲತಾರವರ ಧನ್ಯವಾದದೊಂದಿಗೆ ಸಮಾಪನವಾಯಿತು. ಶಿಕ್ಞಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here