ಕಂಪ್ಯೂಟರೈಸ್ಡ್ ಅಕೌಂಟಿಂಗ್ ತರಬೇತಿಯ ಉದ್ಘಾಟನಾ ಸಮಾರಂಭ

0
35

ಬ್ರಹ್ಮಾವರ : ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಕಂಪ್ಯೂಟರೈಸ್ಡ್ ಅಕೌಂಟಿಂಗ್ ತರಬೇತಿಯ ಉದ್ಘಾಟನಾ ಸಮಾರಂಭ ಕರ‍್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಭರತ್ ರಾಜ್, ಮುಖ್ಯಸ್ಥರು, ರ‍್ಥಶಾಸ್ತ್ರ ವಿಭಾಗ, ಎಸ್ ಎಂ ಎಸ್ ಕಾಲೇಜ್, ಬ್ರಹ್ಮಾವರ ಅವರು ರುಡ್ ಸೆಟ್ ಸಂಸ್ಥೆಯ ಅಭೂತ ಪರ‍್ವ ಕರ‍್ಯ ಚಟುವಟಿಕೆಯನ್ನು ಶ್ಲಾಘಿಸಿಕೊಂಡು, ಸಂಸ್ಥೆಯ ಮುಖಾಂತರ ಅವರು ಪಡೆದ ಅನುಭವವನ್ನು ಕೂಡ ಶಿಬಿರರ‍್ಥಿಗಳೊಂದಿಗೆ ಹಂಚಿಕೊಂಡರು. ಹಾಗೆಯೇ ಸ್ವಂತ ದುಡಿಮೆಯ ಮಹತ್ವವನ್ನು, ಸ್ವಾವಲಂಬಿ ಬದುಕಿನ ಮೌಲ್ಯವನ್ನು, ಅದರ ಅಗತ್ಯತೆಯನ್ನು ತನ್ನ ಸ್ವಂತ ಜೀವನದ ಅನುಭವವನ್ನು ಹಂಚಿಕೊಳ್ಳುವ ಮುಖಾಂತರ ಶಿಬಿರರ‍್ಥಿಗಳನ್ನು ಹುರಿದುಂಬಿಸಿದರು. ಕಂಪ್ಯೂಟರ್ ಕೌಶಲ್ಯವನ್ನು ಕರಗತ ಮಾಡಿಕೊಳ್ಳುವುದು ಈಗಿನ ಹಾಗೂ ಮುಂದಿನ ವಿದ್ಯಮಾನದಲ್ಲಿ ಬಹು ಅಗತ್ಯವಾಗಿ ಅರಿತುಕೊಳ್ಳಬೇಕಾಗಿರುವಂತಹ ವಿಷಯ. ಹಾಗಾಗಿ ಛಲದಿಂದ ಹಿಡಿದ ಕೆಲಸವನ್ನು ಬಿಡದೆ, ಮುಂದುವರಿಯಿರಿ. ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಎಂದು ಹೇಳಿ ಶಿಬಿರರ‍್ಥಿಗಳಿಗೆ ಶುಭ ಹಾರೈಸಿದರು.

ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನ ನಿರ್ದೆಶಕರಾದ ಡಾ. ಬೊಮ್ಮಯ್ಯ ಎಂ ಶಿಬಿರರ‍್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತರಬೇತಿಯನ್ನು ಶ್ರದ್ಧೆಯಿಂದ ಪಡೆದುಕೊಂಡು ಇಲ್ಲಿಂದ ಮುಂದುವರಿಯಬೇಕು. ತರಬೇತಿ ಅವಧಿಯಲ್ಲಿ ಯಾವುದೇ ಅನುಮಾನಗಳಿದ್ದರೂ ಬಗೆಹರಿಸಿಕೊಂಡು, ಕಂಪ್ಯೂಟರ್ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಹಾಗೆಯೇ ಟ್ಯಾಲಿ, GST, ಟೈಪಿಂಗ್ ಮುಂತಾದ ವಿಷಯಗಳು ನಿಮಗೆ ಹೆಚ್ಚು ಅಗತ್ಯವಿರುವ ವಿಷಯಗಳು. ಹಾಗಾಗಿ ಯಾವುದೇ ಅಂಜಿಕೆಯಿಲ್ಲದೆ ಆಸಕ್ತಿಯಿಂದ ತರಬೇತಿಯನ್ನು ಪಡೆದುಕೊಂಡು ಸ್ವಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆ‌ರ್ಥಿಕವಾಗಿ ಸಧೃಢರಾಗಿ. ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಹೆಚ್ಚಿನ ತರಬೇತಿಗಳು ನಡೆಯುತ್ತವೆ. ಅವುಗಳ ಬಗೆ ನಿಮ್ಮ ಪ್ರೀತಿ ಪಾತ್ರರಲ್ಲಿ ವಿಷಯವನ್ನು ಹಂಚಿಕೊಳ್ಳಿ ಎಂದು ಹೇಳಿ ಶಿಬಿರರ‍್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬ್ಯೂಟಿ ಪರ‍್ಲರ್ ತರಬೇತಿಯ ಅತಿಥಿ ಉಪನ್ಯಾಸಕರು ರಾಜಲಕ್ಷ್ಮಿ ಹಾಗೂ ಶಿಬಿರರ‍್ಥಿಗಳು ಉಪಸ್ಥಿತರಿದ್ದರು ಉಪನ್ಯಾಸಕಿ ಚೈತ್ರ ಕೆ ಕರ‍್ಯಕ್ರಮವನ್ನು ನಿರೂಪಿಸಿ, ಹಿರಿಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಕಛೇರಿ ಸಹಾಯಕರಾದ ಶಾಂತಪ್ಪ ವಂದಿಸಿದರು.

LEAVE A REPLY

Please enter your comment!
Please enter your name here