ಮುಲ್ಕಿ : ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ

0
26

ಮುಲ್ಕಿ: ಹಳೆಯಂಗಡಿಯ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ , ಸಂಘದ ಶ್ರೀ ನಾರಾಯಣ ಸನಿಲ್‌ ಸಭಾಭವನದಲ್ಲಿ ನಡೆಯಿತು.
ಪಿ.ಸಿ.ಎ ಬ್ಯಾಂಕ್‌ ಮಾಜೀ ನಿರ್ದೇಶಕ ಭೋಜ್‌ ರಾಜ್ ಕರ್ಕೇರ ರವರು ವಿದ್ಯಾರ್ಥಿ ಪ್ರೋತ್ಸಾಹಧನವನ್ನು ವಿತರಿಸಿ ಮಾತನಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಹಸ್ತದ ಮೂಲಕ ಪ್ರೋತ್ಸಾಹ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು ನಿರಂತರವಾಗಿ ನಡೆಯಲಿ ಹಾಗೆಯೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಾಧಕರಾಗಿ ಪಡೆದುಕೊಂಡ ಸಹಾಯವನ್ನು ಮರೆಯದಿರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಗೆ ನಿರ್ದೇಶಕರ ಹಾಗೂ ಸದಸ್ಯರ ಕೊಡುಗೆ ಅಪಾರವಾಗಿದ್ದು ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಸಂಘದ ಉಪಾಧ್ಯಕ್ಷೆ ಮೀರಾ ಬಾಯಿ ಕೆ. , ನಿರ್ದೇಶಕರಾದ ವಿನೋದ್ ಕುಮಾರ್ ಬೊಳ್ಳೂರು, ಎಚ್. ವಸಂತ್ ಬೆರ್ನಾರ್ಡ್, ಧರ್ಮಾನಂದ ಶೆಟ್ಟಿಗಾರ್, ಅಶೋಕ್ ಬಂಗೇರ, ಸೇಸಪ್ಪ ಟಿ. ಸಾಲ್ಯಾನ್ , ಸಂಧ್ಯಾ, ಮುಖೇಶ್ ಸುವರ್ಣ, ಶಿವರಾಮ ಶೆಟ್ಟಿ , ರೋಶನಾಬಿ ಧನಂಜಯ ಕುಮಾರ್, ಸೊಸೈಟಿಯ ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿನಾಮ , ನಿರ್ದೇಶಕರಾದ ಹಿಮಕರ ಆರ್ ಪುತ್ರನ್, ಮನೋಜ್ ಕುಮಾರ್ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮಕರ್ ಉಪಸ್ಥಿತರಿದ್ದರು,

ಸುಮಾರು 308 ವಿದ್ಯಾರ್ಥಿಗಳಿಗೆ 8 ಲಕ್ಷ ಮೌಲ್ಯದ ವಿದ್ಯಾನಿಧಿ ವಿತರಿಸಲಾಯಿತು. ಕಾರ್ಯನಿರ್ವಣಾಧಿಕಾರಿ ಹಿಮಕರ್ ಸ್ವಾಗತಿಸಿದರು, ಜೊತೆ ಕಾರ್ಯದರ್ಶಿ ಶ್ರೀಕಾಂತಿ ಶೆಟ್ಟಿ ಧನ್ಯವಾದ ಅರ್ಪಿಸಿ, ಸಿಬ್ಬಂದಿ ಅಭಿಷೇಕ್ ನಿರೂಪಿಸಿದರು.

LEAVE A REPLY

Please enter your comment!
Please enter your name here