ಫೂಲ್‌ಚಂದ್ ಶರ್ಮಾ ಅವರಿಗೆ “ಅತ್ಯುತ್ತಮ ಜ್ಯೋತಿಷ್ಯ ಮತ್ತು ಪಂಚಾಂಗ ಶಾಸ್ತ್ರಜ್ಞ” ಪ್ರಶಸ್ತಿ

0
19

ವರದಿ:- ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ

​ ತುಳುನಾಡು : ಜ್ಯೋತಿಷ್ಯ ಮತ್ತು ಪಂಚಾಂಗ ಶಾಸ್ತ್ರ ವಿಭಾಗದಲ್ಲಿ ,’ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ’ (IAO-USA) ಇವರು ಫೂಲ್‌ಚಂದ್ ಶರ್ಮಾ ಇವರ ಸೇವೆಯನ್ನು ಗುರುತಿಸಿ,ಅವರಿಗೆ ಪ್ರತಿಷ್ಠಿತ ಗೌರವ ನೀಡಿ ಸನ್ಮಾನಿಸಿದ್ದಾರೆ .

​ಹೊಸೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಶರ್ಮಾ ಅವರ ಜ್ಯೋತಿಷ್ಯ ಶಾಸ್ತ್ರದ ನೈಪುಣ್ಯತೆ ಮತ್ತು ಪಂಚಾಂಗ ಶಾಸ್ತ್ರ ಜ್ಞಾನ ಗುರುತಿಸಿ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

​ಗಣ್ಯರ ಉಪಸ್ಥಿತಿ :
​ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಐ.ಎನ್.ಟಿ.ಯು.ಸಿ (INTUC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಕೆ.ಎ. ಮನೋಕರನ್, ಶ್ರೀ ಕ್ಷೇತ್ರ ಧರ್ಮ ಧ್ವಜ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಡಾ. ಕೃಷ್ಣಮೂರ್ತಿ ಮಹಾಸ್ವಾಮಿಗಳು, ರಕ್ಷಣಾ ಇಲಾಖೆಯ ಹಿರಿಯ ವಿಜ್ಞಾನಿ ಡಾ. ಸುಬ್ರಮಣ್ಯಂ ಕೆ.ಎಸ್, ಹಿರಿಯ ನ್ಯಾಯವಾದಿ ಆರ್.ಬಿ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ವಿಜೇತರನ್ನು ಅಭಿನಂದಿಸಿದರು.


​ ಸಾಧನೆಗೆ ಸಂದ ಪುರಸ್ಕಾರ

ಫೂಲ್‌ಚಂದ್ ಶರ್ಮಾ ಅವರು ಪ್ರಶಸ್ತಿ ಸ್ವೀಕರಿಸಿ ಜ್ಯೋತಿಷ್ಯ ಮತ್ತು ಪಂಚಾಂಗ ಶಾಸ್ತ್ರ ಒಂದು ವಿಜ್ಞಾನವಾಗಿದ್ದು, ಈ ವಿದ್ಯೆಯನ್ನು ಅಭ್ಯಾಸದಾಗ ನಿಖರವಾಗಿ ಯಾವುದೇ ವಿಷಯಗಳನ್ನು ವಿಜ್ಞಾನದ ಮೂಲಕ ಗುರುತಿಸಬಹುದಾಗಿದೆ ಎಂದರು “ಈ ಗೌರವವು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ, ಎಂದು ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

​ ಅವರ ಈ ಸಾಧನೆಗೆ ಸಂಬಂಧಿಗಳು ಸ್ನೇಹಿತರು ಹಲವು ಜ್ಯೋತಿಷ್ಯ ಶಾಸ್ತ್ರಜ್ಞರು ನಾಡಿನ ಪ್ರಮುಖರು ಶುಭ ಹಾರೈಸಿದ್ದಾರೆ .

LEAVE A REPLY

Please enter your comment!
Please enter your name here