ಸಾಹಿತಿ, ಕವಿಯಾಗಿ, ಜನಮೆಚ್ಚಿದ ಸಂಘಟಕರಾಗಿ, ಕೃತಿ ಕರ್ತ ರಾಗಿ ಕನ್ನಡದ ಕಾಯಕವೇ ಉಸಿರಾಗಿರುವ ಮಂಗಳೂರಿನ ಇರಾ ನೇಮು ಪೂಜಾರಿಯವರೀಗೆ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ 18-01-2026 ಭಾನುವಾರ ದಂದು ಕನ್ನಡ ಭವನ ಸಂಕೀರ್ಣದ ಶ್ರೀ ಕೃಷ್ಣ ದೇವರಾಯ ವೇದಿಕೆಯಲ್ಲಿ ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮ ದಲ್ಲಿ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026 ನೀಡಿ ಗೌರವಿಸಲಿದೆಯೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

