ವೇಣೂರು ಪಟ್ಟಣದ ಸಲೂನ್ ಮಾಲೀಕರು ಇಂದು ಸಭೆ ನಡೆಸಿ, ಸಲೂನ್ ಸೇವೆಗಳ ಮೂಲ ದರಗಳನ್ನು ಅಂತಿಮಗೊಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ವೇಣೂರಿನಲ್ಲಿ ಸಲೂನ್ ಸೇವೆಗಳ ದರ ಹೆಚ್ಚಳವಾಗಿರಲಿಲ್ಲ. ವೆಚ್ಚಗಳ ಏರಿಕೆ, ನಿರ್ವಹಣಾ ಖರ್ಚು ಹಾಗೂ ಕಾರ್ಮಿಕ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಸಲೂನ್ ಮಾಲೀಕರು ಪರಸ್ಪರ ಚರ್ಚೆಯ ಮೂಲಕ ಹೊಸ ಮೂಲ ದರಗಳನ್ನು ನಿಗದಿಪಡಿಸಿದ್ದಾರೆ.
ಈ ಹೊಸ ದರಗಳು 2026 ಜನವರಿ 1ರಿಂದ ವೇಣೂರು ವ್ಯಾಪ್ತಿಯ ಎಲ್ಲಾ ಸಲೂನ್‌ಗಳಿಗೆ ಅನ್ವಯವಾಗಲಿವೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಿಗದಿಪಡಿಸಲಾದ ಮೂಲ ದರಗಳು ಈ ಕೆಳಗಿನಂತಿವೆ:
ಹೇರ್ ಕಟಿಂಗ್ – ₹120
ಮಕ್ಕಳ ಹೇರ್ ಕಟಿಂಗ್ – ₹100
ಕ್ಲೀನ್ ಶೇವಿಂಗ್ – ₹80
ಗಡ್ಡ ಸೆಟ್ಟಿಂಗ್ – ₹100
ಆಯಿಲ್ ಮಸಾಜ್ – ₹100
ಕಾಂಬೋ ಸೇವೆಗಳು :
ಹೇರ್ ಕಟಿಂಗ್ + ಕ್ಲೀನ್ ಶೇವಿಂಗ್ – ₹180
ಹೇರ್ ಕಟಿಂಗ್ + ಗಡ್ಡ ಸೆಟ್ಟಿಂಗ್ – ₹200
ಹೇರ್ ಕಲರ್ ಸೇವೆಗಳು :
ಸಾಮಾನ್ಯ / ಜೆಲ್ ಹೇರ್ ಕಲರ್ – ₹150
ಗಾರ್ನಿಯರ್ ಹೇರ್ ಕಲರ್ – ₹200
ಸಭೆಯಲ್ಲಿ ಮಾತನಾಡಿದ ಸಲೂನ್ ಮಾಲೀಕರು, ಈ ದರಗಳು ಗ್ರಾಹಕರಿಗೂ ಹಾಗೂ ಸಲೂನ್ ವೃತ್ತಿಯವರಿಗೆ ಸಮತೋಲನವಾಗಿರುವಂತೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಗ್ರಾಹಕರು ಸಹಕಾರ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

